Author Special : ಲೇಖಕರ ಕಾರ್ನರ್ – ‘ಮಹಿಳಾ ದಿನಾಚರಣೆ ಭಾಷಣ’ಕ್ಕೆ ಸೀಮಿತವಾಯ್ತಾ..??
ಹುಡುಗೀರು ಯಾರಿಗಿಂತ ಕಡಿಮೆ ಇಲ್ಲ ,
ಹುಡುಗೀರು ಅಬಲೆಯರಲ್ಲ ,
ಹುಡುಗಿಯರಿಗೂ ಅವರಿಷ್ಟದಂತೆ ಬದುಕುವ ಹಕ್ಕಿದೆ,
ಹುಡುಗಿಯರು ಹುಡುಗರು ಅಂತ ಬೇಧ ಭಾವ ಮಾಡಬೇಡಿ
ಎಂದು ಇಷ್ಟಿಷ್ಟಿದ್ದು ಭಾಷಣ ಬಿಗಿದು ತನ್ನ ಮನೆಗೆ ಹೋದ ಓರ್ವ ಮಹಾನ್ ವ್ಯಕ್ತಿ
ತನ್ನ ಹೆಂಡತಿ ಅಡುಗೆಗೆ ಉಪ್ಪು ಕಡಿಮೆ ಹಾಕಿದ್ದಾರೆ ಎಂದು ಪ್ರಶ್ನಿಸಿದವನಿಗೆ ಆಕೆಯ ಎದುರುತ್ತರ ಹಿಡಿಸದೇ ಬಡಿಗೆಯಲ್ಲಿ ಹೊಡೆದನಂತೆ…
ಮಗಳು ಬಂದು ಅಪ್ಪ ನಾನು ಕ್ಲಾಸ್ ಗೆ ಫಸ್ಟ್ ಎಂದವಳ ನೋಡಿಯೂ ನೋಡದವ
ಮಗ ಬಂದು ಜಸ್ಟ್ ಪಾಸ್ ಎಂದವನ ಮುದ್ದಾಡಿ, ನೀನೇ ಕಣೋ ನನ್ನ ಮರ್ಯಾದೆ ಉಳಿಸೋನು , ನನ್ನ ವಂಶೋಧಾರಕ ಎಂದನಂತೆ ,
ಕಣ್ತುಂಬಿಕೊಂಡ ಮಗಳಿಗೆ , ಮದುವೆ ಮಾಡಿಕೊಂಡು ಹೋಗೋಳು ಏನ್ ರ್ಯಾಂಕ್ ಬಂದ್ರೇನು ಎಂದವ
‘ ಮಹಿಳಾ ದಿನಾಚಣೆಗೆ” ಇಷ್ಟುದ್ದ ಭಾಷಣ ಬಿಗಿದ ಅದೇ ‘ಮಹಾನ್ ಪುರುಷ’ನಂತೆ
– ನಿಹಾರಿಕಾ ರಾವ್ ನಮ್ಮು
Author Special : Author’s Corner – did ‘Women’s Day Limited to Speech’..?