Author Special : ವಾಸ್ತವಕ್ಕೆ ಹತ್ತಿರ… ಚುಟುಕು ಕಥೆಗಳು…!!
“ಮಗು ಛತ್ರಿ ತೆಗೆದುಕೊಂಡು ಹೋಗು”
“ಆದ್ರೆ ಅಮ್ಮ ಛತ್ರಿ ಯಾಕೆ ಹೊರಗೆಷ್ಟು ಬಿಸಿಲಿದೆ” ಮಗ ಕೇಳಿದ.
“ಪುಟ್ಟ ನಾ ಹೇಳ್ತಿದ್ದೀನಲ್ಲ ಮಳೆ ಬರುತ್ತೆ ನೀ ಛತ್ರಿ ತೆಗೊಂಡು ಹೋಗು”. ಆಶ್ಚರ್ಯವಾದ್ರೂ ಅಮ್ಮನ ಮಾತು ಗೌರವಿಸಿ ಹೊರಟ ಛತ್ರಿ ಜೊತೆಗೆ.
ಇನ್ನೇನು ಅರ್ಧ ದಾರಿಗೆ ಹೋಗಿದ್ದ. ಇದ್ದಕ್ಕಿದ್ದಂತೆ ಮಳೆ ಶುರುವಾಗಿತ್ತು. ಆಶ್ಚರ್ಯವಾಗಿತ್ತು ಪುಟ್ಟನಿಗೆ. ಆದ್ರೂ ತನ್ನ ಅಮ್ಮನ ಮಾತಿನ ಮೇಲಿನ ನಂಬಿಕೆ ಅವನ ಮಳೆಯಿಂದ ಕಾಪಾಡಿತ್ತು.
>>>>>>>>>>>>>>>>>>>>>>>>>>>>>>>>>>>>>>>>>>>>>>>>>
ಅಮ್ಮ ನಾನೂ ಹೆಣ್ಣೇ
“ಅಮ್ಮ ನನಗೆ ಒಂದು ಮೊಟ್ಟೆ ಬೇಕು”
” ಇಲ್ಲ ಮಾ ಮೊಟ್ಟೆ ಕಾಲಿ”
“ಹೌದ ಸರಿ ಮಾ” ಊಟ ಮಾಡಿ ಎದ್ದು ಕೋಣೆಗೆ ಹೋದಳು. ನಂತರ ಆಚೆ ಬಂದು ನೋಡಿದಾಗ ತಮ್ಮ ಊಟ ಮಾಡುತ್ತಿದ್ದ. ಅವನ ತಟ್ಟೆಯಲ್ಲಿ 3 ಮೊಟ್ಟೆ.
ಅಮ್ಮ “ಗಂಡುಮಕ್ಕಳು ಚನ್ನಾಗಿ ತಿನ್ನಬೇಕು ಮನೆ ಮಕ್ಕಳು”. ಮುಗುಳುನಕ್ಕು ಮಾ ನಾನೂ ಈ ಮನೆ ಮಗಳೇ, ನಿನ್ನಂತೆಯೇ ಎಂದು ಹೋದಳು ಒಳಗೆ.
>>>>>>>>>>>>>>>>>>>>>>>>>>>>>>>>>>>>>>>>>>>>>>>>
“ದೇವರೇ ಸೋತುಹೋದೆ.. ಇನ್ನಾಗಲ್ಲ ನನ್ನ ಕೈಯ್ಯಲ್ಲಿ ನಾನು ಗೆಲ್ಲೋದಿಲ್ಲ ಇಷ್ಟೇ ನನ್ನ ಜೀವನ”
ದೇವರೇ ಕಿರು ನಕ್ಕ ಧ್ವನಿ ಮೋಹಿತನ ಕಿವಿ ಸ್ಪರ್ಷಿಸಿತ್ತು. ನಿನಗೆ ಸಹಾಯ ಮಾಡೋಣವಂತ ಯೋಚಿಸಿದ್ದೆ. ಈಗ ಪ್ರಯೋಜನವಿಲ್ಲ.. ನಿನಗೇ ನಂಬಿಕೆಯಿಲ್ಲ ನಿನ್ನ ಗೆಲುವಿನ ಬಗ್ಗೆ , ಸಕ್ಷಮತೆ ಬಗ್ಗೆ , ದೇವರು ತಾನೆ ಹೇಗೆ ಆತ್ಮವಿಶ್ವಾಸವಿಲ್ಲದವನಿಗೆ ಸಹಾಯ ಮಾಡಲಾಗುತ್ತದೆ. ಎಂದಾಗ ಅವನಿಗರ್ಥವಾಗಿತ್ತು ಸೋಲೊಪ್ಪುವುದು ಪರಿಹಾರವಲ್ಲವೆಂದು ಮೋಹಿತನಿಗೆ..
– ನಿಹಾರಿಕಾ ರಾವ್ ‘ನಮ್ಮು’