Author Special : ಕಾಲ ಮಿಥ್ಯವೇ…??? ಕಾಲವೇ ಈ ಪ್ರಶ್ನೆಗೆ ಉತ್ತರ ಕೊಡುತ್ತೆ..!!!
ಕಾಲ ಮಿಥ್ಯವೇ…???
ಕಾಲವೇ ಈ ಪ್ರಶ್ನೆಗೆ ಉತ್ತರ ಕೊಡುತ್ತೆ..!!!
ಕಾಲವನ್ನ ಕಾಲ್ಕಸಕ್ಕಿಂತ ಕಡೆಯಾಗಿ ನೋಡಿದ ದಿನಗಳಿನ್ನೂ ನೆನಪಿದೆ..
ಕಾಲಕ್ಕೆ ಅವಮಾನಿಸಿ ವೃಥಾ ದಿನಗಳ ವ್ಯರ್ಥ ಮಾಡಿದರ ಪರಿಣಾಮ ಕಣ್ಣೆದುರಿಗಿದೆ..
ಕಾಲ ಯಾರಿಗಾಗಿ ತನ್ನ ಓಟ ನಿಲ್ಲಿಸಲ್ಲ, ಕಾಲದ ಜೊತೆಗೆ ಮುಂದೆ ಸಾಗದೇ ಅದನ್ನೆಷ್ಟು ಹರಣ ಮಾಡಿ ಅವಮಾನಿಸುತ್ತೀವೋ ಅಷ್ಟೆಲ್ಲದಕ್ಕೂ ಕಾಲವೇ ಉತ್ತರಿಸುತ್ತಿರುತ್ತೆ…
ಇವತ್ತು ಮಾಡಬೇಕು ಅಂದುಕೊಂಡಿರೋದನ್ನ ಈಗಲೇ ಮಾಡಿದರೆ ಕಾಲ ಸಾಥ್ ಕೊಡುತ್ತೆ ಹೊರತು , ನಾಳೆ ಮಾಡೋಣ , ನಾಡಿದ್ದು ಮಾಡೋಣ ಅಂತ ಕೂತ್ರೆ ಕಾಲ ನಮಗೆ ಕೈ ಕೊಡೋಕೆ ಒಂದು ಕ್ಷಣ ಕೂಡ ಯೋಚನೆ ಮಾಡೋದಿಲ್ಲ..
ಕಾಲಕ್ಕೆ ಬೆಲೆ ಕೊಡೋರ ಜೊತೆಗಷ್ಟೇ ಕಾಲ ನಿಲ್ಲುತ್ತೆ , ಕಾಲವನ್ನ ಅವಮಾನಿಸೋರ ಜೊತೆಗಲ್ಲ..
ಕಾಲ ಮಿಥ್ಯವೇ..??? ಈ ಪ್ರಶ್ನೆ ಯಾರಲ್ಲಿದ್ದರೂ ಅವರಿಗೇ ಕಾಲವೇ ಉತ್ತರಿಸುತ್ತೆ..
– ನಿಹಾರಿಕಾ ರಾವ್ ನಮ್ಮು
Author Special : Time is a myth…??? Only time will answer this question..!!!