ವಿಶ್ವದಲ್ಲೇ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಅವತಾರ್ ಸಿನಿಮಾವೂ ಒಂದು. ಈ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಇನ್ನೇನು ಕೊನೆಯ ಹಂತ ತಲುಪಿದೆ. ಅವತಾರ್ ಚಿತ್ರ ಅದರ ಸೆಟ್ ಹಾಗೂ ದೃಶ್ಯಗಳಿಗೆ ಸಿಕ್ಕಾಪಟ್ಟೆ ಫೇಮಸ್. ಇದೀಗ ಮೊದಲ ಭಾಗಕ್ಕಿಂತ 2 ಭಾಗ ರೋಮಾಂಚನಕಾರಿಯಾಗಿರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವೂ ಇದೆ.
ನ್ಯೂಜಿಲೆಂಡ್‌ನಲ್ಲಿ 2ನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಈವರೆಗೂ 2ನೇ ಭಾಗವೇ ರಿಲೀಸ್ ಆಗಿಲ್ಲ. ಅದಾಗಲೇ 3ನೇ ಭಾಗದ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವತಾರ್ ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ. ಈಗ ಅವತಾರ್ 2 ಮತ್ತು ಅವತಾರ್ 3 ತಯಾರಾಗುತ್ತಿದೆ. ನಂತರ ಅವತಾರ್ 4 ಮತ್ತು ಅವತಾರ್ 5 ಚಿತ್ರೀಕರಣ ಪ್ರಾರಂಭವಾಗಲಿದೆ. ಅವತಾರ್ 4 ಡಿಸೆಂಬರ್ 18, 2026 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 5 ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ. ಲಾಕ್‌ಡೌನ್ ನಿಂದ ಕೆಲ ಕಾಲ ಸ್ಥಬ್ಧವಾಗಿದ್ದ ಅವತಾರ್ ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ನೀರಿನ ಆಳದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅವತಾರ್ ಮೊದಲ ಭಾಗದಲ್ಲಿ ಪ್ಯಾಂಡೋರಾ ಎಂಬ ಅದ್ಭುತ ಲೋಕ ತೋರಿಸಿದ್ದ ನಿರ್ದೇಶಕ ಜೇಮ್ಸ್ ಕ್ಯಾಮರೂನ್, ಈ ಬಾರಿ ನೀರಿನ ಆಳದಲ್ಲಿ ಅದ್ಭುತ ಲೋಕ ಸೃಷ್ಟಿಮಾದ್ದಾರೆ.
ಇತ್ತೀಚೆಗೆಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಈಗ ಬರುತ್ತಿರುವ ಅವತಾರ್ ಸಿನಿಮಾಗೆ ‘ದಿ ವೇ ಆಫ್ ವಾಟರ್’ ಟ್ಯಾಗ್ ಲೈನ್ ಕೊಟ್ಟಿದ್ದು, ಬಹುತೇಕ ಸಿನಿಮಾ ನೀರಿನ ಬ್ಯಾಕ್ ಡ್ರಾಪ್ ನಲ್ಲೇ ಮೂಡಿ ಬಂದಿದೆ ಎನ್ನುವಂತಿದೆ ಬಿಡುಗಡೆಗೊಂಡ ಟ್ರೈಲರ್. 3ಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಭಾರತೀಯ ನಾನಾ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಬಾರಿ ಅವತಾರ್ ಚಿತ್ರವನ್ನು ಕನ್ನಡದಲ್ಲೂ ನೋಡಬಹುದು ಎಂಬ ಮಾಹಿತಿ ಸಿಕ್ಕಿದೆ..







