Avatar 2 | ನೂರಕ್ಕೂ ಹೆಚ್ಚು ಭಾಷೆಯಲ್ಲಿ ಅವತಾರ್ 2 ಸಿನಿಮಾ..!
ಅವತಾರ್.. 2009 ರಲ್ಲಿ ಜೇಮ್ಸ್ ಕ್ಯಾಮರೂನ್ james-cameron ಸೃಷ್ಠಿಸಿದ ವಿಶುವಲ್ ವಂಡರ್.
ಹೈಲೆವೆಲ್ ಗ್ರಾಫಿಕ್ ವರ್ಕ್ ಜೊತೆಗೆ ಈ ಸಿನಿಮಾ ಹೊಸ ಕಲ್ಪನೆಯ ಲೋಕವನ್ನೇ ಸೃಷ್ಟಿಸಿತ್ತು.
ಪಂಡೋರ ಪ್ರಪಂಚ, ಅಲ್ಲಿನ ಜನರು, ಆ ವಿಚಿತ್ರ ಕುದುರೆಗಳು ಮತ್ತು ಅವುಗಳೊಂದಿಗೆ ನಾಯಕನ ಸಾಹಸಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದ್ದವು.
ಹಲವು ಕೌತುಕಗಳಿಂದ ಕೂಡಿದ ಈ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದೆ.
ಈ ಸಿನಿಮಾದ ಮುಂದುವರಿದ ಭಾಗವಾಗಿ ‘ಅವತಾರ್ 2’ ತೆರೆಕಾಣಲಿದೆ.
‘ಡಾಕ್ಟರ್ ಸ್ಟ್ರೇಂಜ್: ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್’ ಚಿತ್ರವನ್ನು ಪ್ರದರ್ಶಿಸುವ ಚಿತ್ರಮಂದಿರಗಳಲ್ಲಿ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಈಗಾಗಲೇ ಘೋಷಿಸಿದ್ದಾರೆ.
ಅವತಾರ್ 2 ಡಿಸೆಂಬರ್ 16, 2022 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಈ ಸಿನಿಮಾ ಬರೋಬ್ಬರಿ 160 ಭಾಷೆಗಳಲ್ಲಿ ರಿಲೀಸ್ ಆಗಲಿದೆ (Avatar 2 Movie Release In 160 Languages).
ಒಂದು ವೇಳೆ ಇದೇ ನಡೆದರೇ ಸಿನಿಮಾ ಇತಿಹಾಸದಲ್ಲೇ ದಾಖಲೆ ಬರೆಯಲಿದೆ.
ಈ ಸಿನಿಮಾ 3D, 4K, 5K, 8K ವೀಡಿಯೋ ಫಾರ್ಮ್ಯಾಟ್ಗಳಲ್ಲಿ ಬಿಡುಗಡೆಯಾಗುವ ಮಾಹಿತಿ ಇದೆ. Avatar 2 Movie Release In 160 Languages