Avatar 3 : ಅವತಾರ್ 3 ಚಿತ್ರದ ಕಥೆ ರಿವೀಲ್ ಮಾಡಿದ ಜೇಮ್ಸ್ ಕ್ಯಾಮರೂನ್…
ಸುಮಾರು ಒಂದು ದಶಕದ ಹಿಂದೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್’ ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಜೇಮ್ಸ್ ಕ್ಯಾಮರೂನ್ ತಾನು ಕಂಡ ಕನಸನ್ನ ಪ್ರೇಕ್ಷಕರಿಗೆ ತೋರಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದರು.
ಆನಂತರ ಈ ಸಿನಿಮಾದ ಸೀಕ್ವೆಲ್ ಗಳನ್ನು ತರುವುದಾಗಿ ಘೋಷಿಸಿದ್ದ ಜೇಮ್ಸ್ ಇತ್ತೀಚೆಗಷ್ಟೇ ಅವತಾರ್-2 ಸಿನಿಮಾವನ್ನ ಬಿಡುಗಡೆ ಮಾಡಿದ್ದರು. ‘ಅವತಾರ್ ದ ವೇ ಆಫ್ ವಾಟರ್’ ಸಾಗರದಾಳದ ದೃಶ್ಯಕ್ಕೆ ಪ್ರೇಕ್ಷಕರು ಮನಸೋತಿದ್ದರು. ಇವುಗಳಲ್ಲಿ ಒಟ್ಟು 5 ಸೀಕ್ವೆಲ್ ಗಳಿರುವುದಾಗಿ ಜೇಮ್ಸ್ ಈಗಾಗಲೇ ಹೇಳಿದ್ದಾರೆ. ಭೂಮಿ ಮತ್ತು ನೀರಿನ ನಂತರ ಇದೀಗ ಮೂರನೇ ಪಾರ್ಟ್ ಹೇಗಿರಲಿದೆ ಎನ್ನುವುದನ್ನ ಸ್ವತಃ ನಿರ್ದೇಶಕರೇ ಬಹಿರಂಗ ಪಡಿಸಿದ್ದಾರೆ.
ಅವತಾರ್-2 ಚಲನಚಿತ್ರ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿತು. ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ಜೇಮ್ಸ್ ಕ್ಯಾಮರೂನ್ ಅವತಾರ್-3 ಕುರಿತು ಮಾತನಾಡುತ್ತಾ.. “ ಅವತಾರ್-3 ಬೆಂಕಿಯ ಥೀಮ್ನೊಂದಿಗೆ ಬರಲಿದೆ. ಪಂಡೋರಾ ಗ್ರಹದ ಇನ್ನೊಂದು ಭಾಗದಲ್ಲಿ ಕಥೆ ಮುಂದುವರಿಯುತ್ತದೆ. ಈ ಸಿನಿಮಾದಲ್ಲಿ ಹೊಸ ಬುಡಕಟ್ಟು, ಹೊಸ ಸಂಸ್ಕೃತಿಗಳನ್ನು ಪರಿಚಯಿಸಲಿದ್ದೇವೆ’ ಎಂದರು. ಅದೇ ವೇದಿಕೆಯಲ್ಲಿದ್ದ ಜೇಮ್ಸ್ ಕ್ಯಾಮರೂನ್ ಪತ್ನಿ, ‘ಅವತಾರ್-3 ನಿಮ್ಮ ನಿರೀಕ್ಷೆಗೂ ಮೀರಿ ಇರಲಿದೆ’ ಎಂದಿದ್ದಾರೆ. ಈ ಚಿತ್ರ ಡಿಸೆಂಬರ್ 2024 ರಲ್ಲಿ ಬಿಡುಗಡೆಯಾಗಲಿದೆ.
Avatar 3: James Cameron revealed the story of Avatar 3…