ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಜಾಮೀನು ರಹಿತ ಬಂಧನ ವಾರಂಟ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ಜಾಮೀನು ರಹಿತ ಬಂಧನ ವಾರಂಟ್

ಇಸ್ಲಾಮಾಬಾದ್‌, ಸೆಪ್ಟೆಂಬರ್16: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪಾಕಿಸ್ತಾನದ ನ್ಯಾಯಾಲಯ ಮಂಗಳವಾರ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಅವರು ಭ್ರಷ್ಟಾಚಾರ ಪ್ರಕರಣದ ಮೇಲ್ಮನವಿ ವಿಚಾರಣೆ ವೇಳೆ ಹಾಜರಾಗಲು ವಿಫಲರಾಗಿದ್ದಕ್ಕಾಗಿ ಪಾಕಿಸ್ತಾನದ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.

ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ಮೊಹ್ಸಿನ್ ಅಖ್ತರ್ ಕಯಾನಿ ಅವರನ್ನೊಳಗೊಂಡ ಇಸ್ಲಾಮಾಬಾದ್ ಹೈಕೋರ್ಟ್‌ನ ಎರಡು ಸದಸ್ಯರ ಪೀಠವು ಅಲ್-ಅಜೀಜಿಯಾ ಸ್ಟೀಲ್ ಮಿಲ್‌ಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಅವರ ಮೇಲ್ಮನವಿಯನ್ನು ಕೈಗೆತ್ತಿಕೊಂಡಿತು. 70 ವರ್ಷದ ಷರೀಫ್ ಕಳೆದ ವರ್ಷ ನವೆಂಬರ್‌ನಿಂದ ಲಂಡನ್‌ನಲ್ಲಿದ್ದು, ಲಾಹೋರ್ ಹೈಕೋರ್ಟ್ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಹೋಗಲು ಅವರಿಗೆ ಅನುಮತಿ ನೀಡಿತ್ತು.

ಮಾಜಿ ಪ್ರಧಾನಿ ನವಾಜ್ ಷರೀಫ್ , ಅವರ ಮಗಳು ಮರಿಯಮ್ ಮತ್ತು ಸೊಸೆ ಮುಹಮ್ಮದ್ ಸಫ್ದಾರ್ ಅವರು ಜುಲೈ 6, 2018 ರಂದು ಅವೆನ್‌ಫೀಲ್ಡ್ ಪ್ರಾಪರ್ಟಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. 2018 ರ ಡಿಸೆಂಬರ್‌ನಲ್ಲಿ ನಡೆದ ಅಲ್-ಅಜೀಜಿಯಾ ಸ್ಟೀಲ್ ಮಿಲ್ಸ್ ಪ್ರಕರಣದಲ್ಲಿ ಷರೀಫ್‌ಗೆ ಏಳು ವರ್ಷ ಶಿಕ್ಷೆ ವಿಧಿಸಲಾಯಿತು. ಆದರೆ ಎರಡೂ ಪ್ರಕರಣಗಳಲ್ಲಿ ಷರೀಫ್‌ಗೆ ಜಾಮೀನು ನೀಡಲಾಯಿತು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಲು ಸಹ ಅವಕಾಶ ನೀಡಲಾಯಿತು. ಷರೀಫ್ ಅವರ ವಕೀಲ ಖವಾಜಾ ಹರಿಸ್ ಅಹ್ಮದ್ ಕಳೆದ ವಾರ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ರಿವ್ಯೂ ಅರ್ಜಿಯನ್ನು ಸಲ್ಲಿಸಿದ್ದು, ಅವರ ಆರೋಗ್ಯ ಸ್ಥಿತಿಯು ಲಂಡನ್‌ನಿಂದ ಮನೆಗೆ ಮರಳಲು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು.

ನಿಯಮಿತ ವಿಚಾರಣೆಗೆ ಮೇಲ್ಮನವಿ ತೆಗೆದುಕೊಳ್ಳುವ ಮೊದಲು ಸೆಪ್ಟೆಂಬರ್ 15 ರೊಳಗೆ ಶರೀಫ್ ಗೆ ಶರಣಾಗುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿತ್ತು. ಅವರು ಆದೇಶವನ್ನು ಪಾಲಿಸಲು ಸಾಧ್ಯವಾಗದ ಕಾರಣ, ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತು ಮತ್ತು ವಿಚಾರಣೆಯನ್ನು ಸೆಪ್ಟೆಂಬರ್ 22 ರವರೆಗೆ ಮುಂದೂಡಿದೆ. ವಿಚಾರಣೆಯಿಂದ ವಿನಾಯಿತಿ ಕೋರಿ ಷರೀಫ್ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This