ಅಜ್ಮೀರ್ : ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಬಂದಿದ್ದ ಕಾಂಗ್ರೆಸ್ ನ ಕೆಲವು ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಅಜ್ಮೀರ್ನಲ್ಲಿ ರೋಡ್ ಶೋ ನಡೆದ ನಂತರ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶ್ರೀರಾಮನನ್ನು ದ್ವೇಷಿಸುತ್ತದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಹೋಗದಂತೆ ಕಾಂಗ್ರೆಸ್ ತಾಕೀತು ಮಾಡಿತ್ತು. ಶ್ರೀರಾಮನಿಲ್ಲದ ಈ ದೇಶವನ್ನು ನೀವು ಊಹಿಸಬಲ್ಲಿರಾ? ಎಂದು ಪ್ರಶ್ನಿಸಿದ ಅವರು, ನಮ್ಮ ದಿನನಿತ್ಯ ಆರಂಭವಾಗುವುದೇ ರಾಮನಿಂದ. ಕೊನೆಗೊಳ್ಳುವುದು ಕೂಡ ರಾಮನಿಂದ. ಆದರೆ ಇವರಿಗೇಕೆ ರಾಮನ ಮೇಲೆ ಕೋಪ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಮನೆಯಲ್ಲಿ ರಾಮನಿದ್ದಾನೆ. ಇನ್ನೇನು ಕೆಲ ದಿನಗಳಲ್ಲಿ ರಾಮನವಮಿ ಬರುತ್ತದೆ. ಪ್ರತಿಯೊಬ್ಬರು ಅದ್ಧೂರಿಯಾಗಿ ರಾಮನವಮಿ ಆಚರಿಸುತ್ತಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಬಡವರು, ಹಿಂದುಳಿದವರು ಮತ್ತು ಯುವಕರ ಕಲ್ಯಾಣದ ಎಂದಿಗೂ ವಿಚಾರಿಸಿಲ್ಲ. ಈಗ ನಮಗೆ ಅದರ ಪಾಠ ಮಾಡುತ್ತಿದೆ ಎಂದು ಲೇವಡಿ ಮಾಡಿದರು.