ಬೆಂಗಳೂರು: ಜ. 22ರಂದು ಅಯೋಧ್ಯೆಯಲ್ಲಿ (Ayodhye) ರಾಮವೈಭವ ನಡೆಯಲಿದ್ದು, ಅಂದು ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಮನೆ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಲಿದೆ.
ಶ್ರೀರಾಮನ (Ramamandir) ಸಂಭ್ರಮದ ರಥಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಸಂದರ್ಭದಲ್ಲಿ ರಾಮನ ಸನ್ನಿಧಾನದಿಂದಲೇ ಮಂತ್ರಾಕ್ಷತೆ ತಲುಪಿಸುವ ಕೆಲಸವನ್ನು ವಿಶ್ವಹಿಂದೂ ಪರಿಷತ್ ಮಾಡಲು ಮುಂದಾಗಿದೆ.
ವಿವಿಪುರಂನ ಆಂಜನೇಯನ ದೇಗುಲದಲ್ಲಿ ಕಲಶದಲ್ಲಿ ಮಂತ್ರಾಕ್ಷತೆ, ರಾಮನ ಭಾವಚಿತ್ರವನ್ನು ಮನೆ ಮನೆಗೂ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.