ಚಿನ್ನದ ಲೇಪನದಿಂದ ಕಂಗೊಳಿಸಿದ ಜಾಲಹಳ್ಳಿಯ ಅಯ್ಯಪ್ಪ ದೇವಾಲಯ…
ಬೆಂಗಳೂರಿನ ಜಾಲಹಳ್ಳಿಯ ಅಯ್ಯಪ್ಪ ದೇವಾಲಯದ 55ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗರ್ಭಗುಡಿಯ ಚಿನ್ನ ಲೇಪನ ಕಾರ್ಯ ಮುಕ್ತಾಯವಾಗಿದ್ದು, ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಲೋಕಾರ್ಪಣೆ ಮಾಡಿದೆ.
ಶಬರಿಮಲೆಯ ಬಳಿಕ ಅತ್ಯಂತ ಪ್ರಸಿದ್ಧಿ ಪಡೆದಿರುವ ಅಯ್ಯಪ್ಪನ ದೇವಾಲಯ, ಬೆಂಗಳೂರಿನ ಜಾಲಹಳ್ಳಿನಲ್ಲಿರುವ ಅಯ್ಯಪ್ಪ ದೇವಾಲಯ. ಈ ದೇವಸ್ಥಾನದ 55ನೇ ವಾರ್ಷಿಕೊತ್ಸವವು ಸಕಲ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನಡೆಯಿತು. ಶಬರಿ ಮಲೆಯ ಅಯ್ಯಪ್ಪ ದೇವಸ್ಥಾನದ ಮಾದರಿಯಲ್ಲೇ ಈ ದೇಗುಲದ ಗರ್ಭಗುಡಿಯಲ್ಲೂ ಚಿನ್ನದ ಲೇಪನ ಮಾಡಲಾಗಿದೆ.
ಈ ಚಿನ್ನದ ಲೇಪನ ಲೋಕಾರ್ಪಣೆ ಕಾರ್ಯಕ್ರಮವನ್ನು ಕೇರಳದ ಶಬರಿ ಮೆಲೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ತಾಳಮನ್ ಮಡಮ್ ರಾಜೀ ಅವರು ಧಾರ್ಮಿಕ ಪದ್ಧತಿಯಂತೆ ನೆರೆವೆಸಿ ಕಳಸದ ಪ್ರತಿಷ್ಠಾಪನೆ ಮಾಡಿದರು.
ಸುಮಾರು 15 ವರ್ಷಗಳ ಚಿನ್ನದ ಲೇಪನದ ಕನಸು ಇಂದು ನನಸಾಗಿದೆ. 11 ಕೆ.ಜಿ ಚಿನ್ನವನ್ನು ಬಳಸಿಕೊಂಡು ದೇವಾಲಯದ ಗರ್ಭಗುಡಿಗೆ ಚಿನ್ನದ ಲೇಪನದ ತಗಡನ್ನು ಯಶಸ್ವಿಯಾಗಿ ಆಳವಡಿಕೆ ಮಾಡಲಾಗಿದ್ದು, ಇಂದು ಬೆಳಗ್ಗೆ ಭಕ್ತರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ.