Azaan controversy : ರಾಜ್ಯದಲ್ಲಿ 10,899 ಲೌಡ್ ಸ್ಪೀಕರ್ ಗೆ ಅನುಮತಿ
ಬೆಂಗಳೂರು : ರಾಜ್ಯದಲ್ಲಿ ಆಜಾನ್ ವಿವಾದ ಮುನ್ನಲೆಗೆ ಬಂದ ಕಾರಣ ಯಾವುದೇ ಧಾರ್ಮಿಕ ಕೇಂದ್ರಗಳು ಲೌಡ್ ಸ್ಪೀಕರ್ ಬಳಸಬೇಕೆಂದರೆ ಅನುಮತಿ ಪಡೆಯಬೇಕಾಗಿದೆ.
ಹೀಗಾಗಿ ರಾಜ್ಯದಾದ್ಯಂತ 17,000 ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 10,899 ಧಾರ್ಮಿಕ ಕೇಂದ್ರಗಳಿಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
450 ರೂಪಾಯಿ ಶುಲ್ಕ ಪಡೆದು ಲೌಡ್ ಸ್ಪೀಕರ್ ಬಳಕೆಗೆ ಪಡೆದಿರುವ ಅನುಮತಿ ಎರಡು ವರ್ಷಗಳಿಗೆ ಸೀಮಿತವಾಗಿತ್ತದೆ. ಆ ಬಳಿಕ ಇದನ್ನು ನವೀಕರಸಬೇಕಾಗುತ್ತದೆ.
10,899 ಧಾರ್ಮಿಕ ಕೇಂದ್ರಗಳ ಪೈಕಿ ಮೂರು ಸಾವಿರಕ್ಕೂ ಹೆಚ್ಚು ಹಿಂದೂ ದೇವಾಲಯಗಳಿಗೆ ಅನುಮತಿ ಸಿಕ್ಕಿದೆ.
1400ಕ್ಕೂ ಹೆಚ್ಚು ಚರ್ಚ್ ಗಳಲ್ಲಿ ಧ್ವನಿವರ್ಧಕ ಬಳಸಬಹುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1841 ಮಸೀದಿಗಳಿಗೆ ಅನುಮತಿ ನೀಡಲಾಗಿದೆ.