ಆಜಾದಿ ಕಾ ಅಮೃತ ಮಹೋತ್ಸವ BJPಯದ್ದು, ಜನ್ಮದಿನೋತ್ಸವ Congress ಸಂಸ್ಕೃತಿ
ಬೆಂಗಳೂರು : ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿ ಜನರು ಸಂಕಷ್ಟದಲ್ಲಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವುದರ ಔಚಿತ್ಯವನ್ನು ರಾಜ್ಯದ ಜನತೆ ತೀರ್ಮಾನಿಸಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು.
ಇದಕ್ಕೆ ತದ್ವಿರುದ್ಧವಾಗಿ ದೇಶಕ್ಕಿಂತ ಪಕ್ಷ, ಈ ಕುಟುಂಬ ಮುಖ್ಯ ಎಂಬ ಚಿಂತನೆ ಹೊಂದಿರುವ ಪಕ್ಷ ಅವರದ್ದು.
ನಾವು “ಸ್ವಾತಂತ್ರ್ಯದ ಅಮೃತ ಮಹೋತ್ಸವ” ಆಚರಿಸಿದರೆ, ಅವರು ಅವರದ್ದೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಾರ.
ನಮ್ಮ ಪಕ್ಷದಲ್ಲಿ ವ್ಯಕ್ತಿಪೂಜೆ, ಪಲ್ಲಕ್ಕಿ ಪೂಜೆಗೆ ಅವಕಾಶ ಇಲ್ಲ. ಕಾಂಗ್ರೆಸ್‌ನಲ್ಲಿ ಅದೇ ಮುಖ್ಯ ಲಸಿಕಾಕರಣ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಶನಿವಾರ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ಅತಿಯಾದ ಮಳೆಯಿಂದ ಅನೇಕ ಜಿಲ್ಲೆಗಳ ಜನರು ಸಂತ್ರಸ್ಥರಾಗಿ ಪರದಾಡುತ್ತಿರುವಾಗ ಜನ್ಮದಿನಾಚರಣೆ ಆಚರಿಸಿಕೊಳ್ಳುವುದು ಸರಿಯೇ? ತಪ್ಪೇ ಎಂಬುದನನ್ನು ಅವರ ವಿವೇಚನೆಗೆ ಬಿಡುತ್ತೇನೆ.
ಆ ಬಗ್ಗೆ ರಾಜ್ಯದ ಜನ ನಿರ್ಣಯಿಸುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.