ನಾವು ಬಿಜೆಪಿಗೆ ಬಂದಿದ್ದರಿಂದಲೆ ಈಶ್ವರಪ್ಪ ಸಚಿವರಾಗಿದ್ದು : ಬಿ.ಸಿ.ಪಾಟೀಲ್ ತಿರುಗೇಟು K S Eshwarappa
ಮೈಸೂರು : ನಾವು ಬಿಜೆಪಿಗೆ ಬಂದಿದ್ದರಿಂದಲೇ ನೀವು ಸಚಿವರಾಗಿದ್ದು ಎಂಧು ಸಚಿವ ಕೆ.ಎಸ್.ಈಶ್ವರಪ್ಪಗೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ಇಂದು ಬೆಳಿಗ್ಗೆ ನಾಯಕತ್ವದ ಗೊಂದಲದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಲಸೆ ಬಂದ 17 ಶಾಸಕರಿಂದಲೇ ನಾಯಕತ್ವ ಬದಲಾವಣೆ ಗೊಂದಲ ಶುರುವಾಗಿದ್ದು ಎಂಬ ಹೇಳಿಕೆ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಬಿ.ಸಿ.ಪಾಟೀಲ್, ನಾವು ಬಿಜೆಪಿ ಬಂದಿದ್ದರಿಂದಲೆ ಈಶ್ವರಪ್ಪ ಸಚಿವರಾಗಿದ್ದು ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, 17 ಜನ ಬಿಜೆಪಿಗೆ ಬಂದಿದ್ದರಿಂದಲೇ ಸರ್ಕಾರ ರಚನೆಯಾಗಿ, ಈಶ್ವರಪ್ಪನವರು ಮಂತ್ರಿಯಾಗಲು ಸಾಧ್ಯವಾಯಿತು.
ಈಗ ಈಶ್ವರಪ್ಪ ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.
ಅಲ್ಲದೆ ನಾಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆಗಳಿಗೆ ನಾಳೆ ತೆರೆ ಬೀಳುತ್ತೆ.
ಪಕ್ಷದಲ್ಲಿರುವ ಗೊಂದಲಗಳಿಗೂ ಪರಿಹಾರ ಸಿಗಲಿದ್ದು, ಹೇಳಿಕೆಗಳನ್ನು ನೀಡುವ ನಾಯಕರಿಗೂ ತಿಳಿ ಹೇಳಲಿದ್ದಾರೆ ಎಂದರು.









