ಬೆಳಗಾವಿ : ಬಿಎಸ್ ಯಡಿಯೂರಪ್ಪ ಸರ್ವಾಧಿಕಾರಿ ಮುಖ್ಯಮಂತ್ರಿ. ಅವರು ಪಕ್ಷಾಂತರದ ಪ್ರಭು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ
ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರಲ್ಲಿ ದ್ವೇಷ ಅಸೂಯೇ ತುಂಬಿಕೊಂಡಿದೆ.
ರಾಜ್ಯದ ಯಾವ ಉಪಮುಖ್ಯಮಂತ್ರಿ, ಸಚಿವರು, ಶಾಸಕರಿಗೂ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ.
ನಾನು ಶಾಸನ ಸಭೆಗೆ ಬರದಂತೆ ಬಿಎಸ್ ವೈ ಮಾಡುತ್ತಿದ್ದಾರೆ.
ನಾನು ಶಾಸನಸಭೆಗೆ ಬರದಂತೆ ಹಣ ಇದ್ದವರನ್ನು ಚುನಾವಣೆಗೆ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ತಕ್ಷಣವೇ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಬೇಕು.
15 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿದ ವಾಟಾಳ್, ಉತ್ತರ ಕರ್ನಾಟಕ ಶಾಸಕರು, ಬೆಳಗಾವಿ ಜಿಲ್ಲೆ ಶಾಸಕರು ಏನು ಮಾಡುತ್ತಿದ್ದಾರೆ.
ಅಧಿವೇಶನ ನಡೆಸುವ ಮೂಲಕ ಶಿವಸೇನೆ, ಎಂಇಎಸಗೆ ತಕ್ಕ ಪಾಠ ಕಲಿಸಬೇಕು.
ಪ್ರವಾಹದಿಂದ ತತ್ತರಿಸಿದ ಜನರಿಗೆ ಸ್ಪಂದಿಸಬೇಕು. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.








