ಯೋಗೇಶ್ವರ್ ಗೆ ಡಿಸಿಎಂ ಪಟ್ಟ.. ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ
ವಿಜಯಪುರ : ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಜೂನ್ 15ರೊಳಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಹಾಗಾಗದಿದ್ದರೆ, ಸಚಿವ ಸಿ.ಪಿ.ಯೋಗೇಶ್ವರ ಉಪಮುಖ್ಯಮಂತ್ರಿ ಜತೆಗೆ ಉನ್ನತ ಖಾತೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಯೋಗೇಶ್ವರ್ ಅವರನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ಬಿಎಸ್ವೈ ಗೆ ಇಲ್ಲ.
ಯೋಗೇಶ್ವರ್ ಅವರಿಗೆ ಡಿಸಿಎಂ ನೀಡಿ ಅದರ ಜತೆಗೆ ಇಂಧನ ಖಾತೆ ಸಹ ನೀಡಬಹುದು. ಇಲ್ಲವಾದರೆ ಅನಿರ್ವಾಯವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಆರ್ ಎಸ್ ಎಸ್ ತಮ್ಮನ್ನು ಕರೆಯಿಸಿಕೊಂಡಿ ಮಾತುಕತೆ ನಡೆಸಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅಂಥ ಬುಲಾವು ತಮಗೆ ಬಂದಿರಲಿಲ್ಲ. ಆ ರೀತಿ ಯಾವುದೇ ಬೆಳೆವಣಿಗೆ ನಡೆದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.