ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ ಅಲ್ಲಾ – ರಾಮುಲು..!
ಗದಗ : ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ ಅಲ್ಲಾ. ಇವತ್ತು ಇರುವಂತ ಪರಿಸ್ಥಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಅವರು ಗದಗದಲ್ಲಿ ಹೇಳಿದ್ದಾರೆ. ಬಿ ಎಸ್ ವೈ ನೇತೃತ್ವದ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ಕೊಟ್ಟಿರುವ ಅವರು ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ. ಬಿ ಎಸ್ ಯಡಿಯೂರಪ್ಪನವರು ಮಿಷನ್ 2022 ಮೂಲಕ ಬೆಂಗಳೂರು ಅಭಿವೃದ್ಧಿ ಮಾಡಲಿದ್ದಾರೆ. ಕೊರೋನಾ ಇರುವುದಿಂದ ಮಂತ್ರಿಗಳು ಹಾಗೂ ಅಧಿಕಾರಿಗಳು ಹೊರಗಡೆ ಬರಲು ಆಗಲಿಲ್ಲಾ. ಹಾಗೇ ಕರ್ನಾಟಕದ ಅಭಿವೃದ್ಧಿ ಮಾಡುವ ಉದ್ದೇಶ ಮಿಷನ್ 2030 ಅಭಿವೃದ್ಧಿ ಮಾಡಲಾಗುತ್ತಿದೆ ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಂದ ಅಂತಾ ಹೇಳ್ತಾಯಿದ್ದಾರೆ. ನಮ್ಮ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಅನುದಾನ ಕೊಡುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.
ಇದೇ ವೇಳೆ ವಿಶೇಷವಾಗಿ ಸಿದ್ದರಾಮಯ್ಯನವರಿಗೆ ಒಂದು ಮಾತು ಹೇಳುತ್ತೇನೆ ಎಂದಿರುವ ರಾಮುಲು ಸಿಎಂ ಇದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಹಾಗೂ ಕೋವಿಡ್ ಹೀಗಾಗಿ ಹಣಕಾಸಿನ ತೊಂದರೆ ಆಗಿದೆ. ಕೊರೋನಾದಲ್ಲಿ ಎಷ್ಟು ಖರ್ಚು ಮಾಡಿದ್ದೇವೆ ಎಂದು ಸದನದಲ್ಲಿ ಹೇಳಿದ್ದೇವೆ. ಬಾದಾಮಿಯಲ್ಲಿ ಇವತ್ತು ಸಿದ್ದರಾಮಯ್ಯನವರೊಂದಿಗೆ ಶಂಕು ಸ್ಥಾಪನೆ ಮಾಡುತ್ತೇನೆ ಅಂದ್ರೆ ಅದು ಸರ್ಕಾರದ ಪರವಾಗಿ ಅಭಿವೃದ್ಧಿಯಾದ ಕೆಲಸ ಅಲ್ವೆ. ಮಸ್ಕಿಯಲ್ಲಿ 25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನೂ ಪಂಚಮಸಾಲಿ ಸಮುದಾಯದ ಜನ 2 ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ವಿಚಾರವಾಗಿ ಮಾತನಾಡಿರೋ ಅವರು ಸಿಎಂ ಬಿ ಎಸ್ ಯಡಿಯೂರಪ್ಪನವರು ಹಿಂದುಳಿದ ವರ್ಗದ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ. ಇನ್ನೂ ಕುರುಬ ಸಮುದಾಯ ಎಸ್ಟಿಗೆ ಸೇರಬೇಕು ಅಂತಾ ಹೋರಾಟ ನಡೆಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ 26 ಜಿಲ್ಲೆಯಲ್ಲಿ ಕುಲ ಶಾಸ್ತ್ರ ಅಧ್ಯಾಯ ನಡೆಯುತ್ತಿದೆ. ಕುಲಶಾಸ್ತ್ರ ಅಧ್ಯಯನ ಮುಗಿದ ಕೂಡಲೇ ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಬೇಕು ಅಂತಾ ಸರ್ಕಾರ ಗಮನ ಹರಿಸುವ ಕೆಲಸ ಮಾಡುತ್ತದೆ. ವಾಲ್ಮೀಕಿ ಸಮುದಾಯ ಹಾಗೂ ಎಸ್ಟಿ ಸಮುದಾಯ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪನವರು ಈ ಸಂಬಂಧ ತಿರ್ಮಾನ ಕೈಗೊಳ್ಳುತ್ತಾರೆ ಎಂದಿದ್ದಾರೆ.
ರಾಜ್ಯಸಭೆ ವಿಪಕ್ಷನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ
ಸಿದ್ದರಾಮಯ್ಯ ಟ್ರಂಪ್ ಇದ್ದಂತೆ : ಹೆಚ್.ವಿಶ್ವನಾಥ್
ಗೋವಾ ನೆಲದಲ್ಲಿ ಕನ್ನಡ ಡಿಂಡಿಮ ಬಾರಿಸಿದ ಕೆ.ಸಿ ವೀರೇಂದ್ರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








