ಮಂಗಳೂರು: ವಿವಾದಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ಸಿಬಿಐ ನಿರ್ದೋಷಿ ಎಂದು ಘೋಷಣೆ ಮಾಡಿದೆ. ಈ ಮೂಲಕ ಭಾರತವು ಪ್ರಪಂಚದ ಎದುರು ತಲೆ ತಗ್ಗಿಸುವ ತೀರ್ಪನ್ನು ಲಕ್ನೋ ಕೋರ್ಟ್ ನೀಡಿದೆ ಎಂದು ಎಸ್ಡಿಪಿಐ ಬೇಸರ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಭಾರತದಲ್ಲಿ ನಿಜವಾಗಿಯೂ ಪ್ರಜಾಪ್ರಭುತ್ವ ಇದೆಯಾ ಅನ್ನೋ ಸಂಶಯ ಮೂಡುತ್ತಿದೆ. ನ್ಯಾಯಾಲಯದಲ್ಲೂ ನ್ಯಾಯ ಸಿಗುತ್ತಿಲ್ಲ ಅನ್ನೋದಾದ್ರೆ ಈ ದೇಶ ಎತ್ತ ಕಡೆ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರ ತೀರ್ಪಿನಲ್ಲೂ ಬಾಬ್ರಿ ಧ್ವಂಸ ಅಪರಾಧ ಅಂತ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಕೋರ್ಟ್ ನ ಇವತ್ತಿನ ತೀರ್ಪು ದೇಶದಲ್ಲಿ ನ್ಯಾಯ ಉಳಿದಿಲ್ಲ ಅನ್ನುವಷ್ಟರ ಮಟ್ಟಿಗೆ ನಾಚಿಗೆಕೇಡು. 28 ವರ್ಷ ಕಾದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಅಂತಾದ್ರೆ ನ್ಯಾಯ ಎಲ್ಲಿದೆ. ಬಿಜೆಪಿ ಮತ್ತು ಸಂಘ ಪರಿವಾರ ಪ್ರಭುತ್ವ ಬೀರಿ ದೇಶ ಒಡೆಯಲು ಯತ್ನಿಸುತ್ತಿದೆ ಎಂದು ಅಶ್ರಫ್ ಹೇಳಿದ್ದಾರೆ.