Baburao Chinchansur | ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಾಬುರಾವ್ ಆಕ್ರೋಶ
ಕಲಬುರಗಿ : ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಲಂಚ ಮಂಚ ಹೇಳಿಕೆಗೆ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪ್ರಿಯಾಂಕ್ ಹೇಳಿಕೆಯನ್ನ ನಾನು ತೀವ್ರ ಖಂಡನೆ ಮಾಡುತ್ತೇನೆ.
ಭಾರತಾಂಬೆ ಕೂಡ ಹೆಣ್ಣು, ನಮ್ಮ ಅಕ್ಕ ತಂಗಿಯರು ಕೂಡ ಹೆಣ್ಣೆ, ಪ್ರಿಯಾಂಕ್ ಖರ್ಗೆ ನಡತೆ ಗರ್ವ ಏನಿದೆ ಅನ್ನೊದು ನಿಮಗೆಲ್ಲ ತಿಳಿದಿದೆ
ಪ್ರಿಯಾಂಕ್ ಗತಿ ಏನಾಗುತ್ತೆ ಅನ್ನೊದು ಕರ್ನಾಟಕ ಜನತೆ ನೋಡುತ್ತಾರೆ. ನನ್ನ ಶಕ್ತಿ ಈ ಹಿಂದಿನ ಚುನಾವಣೆಯಲ್ಲಿ ಗೊತ್ತಾಗಿದೆ.
2023 ರ ಚುನಾವಣೆಯಲ್ಲಿ ನಮ್ಮ ಶಕ್ತಿ ಹೈಕಮಾಂಡ್‌ಗೂ ತಿಳಿಯಲಿದೆ ಎಂದು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಕಲಬುರಗಿಯಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ಜೆಪಿ ಸರ್ಕಾರ ಲಂಚ & ಮಂಚದ ಸರಕಾರ.
ಕರ್ನಾಟಕದಲ್ಲಿ ಸರಕಾರಿ ನೌಕರಿ ಸಿಗಬೇಕು ಅಂದ್ರೆ ಯುವಕರು ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕು.
ಇಲ್ಲಾಂದ್ರೆ ಯುವಕ ಯುವತಿಯರಿಗೆ ನೌಕರಿ ಸಿಗಲ್ಲ ಎಂದು ಗಂಭೀರ ಆರೋಪ ಮಾಡಿದರು.