ಉತ್ತರಪ್ರದೇಶದ ಝಾನ್ಸಿಯ ಲಕ್ಷ್ಮೀಬಾಯಿ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.
ದೆಹಲಿಯಲ್ಲಿ ಕೂಡ ಕಳೆದ ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಮೂಲದ ಮಹಿಳೆಯೊಬ್ಬರು ಜನ್ಮ ನೀಡಿದ್ದರು.
ಈಗ ರೈಲು ಪ್ಲಾಟ್ ಫಾರ್ಮ್ ನಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗರ್ಭಿಣಿ ಹಾಗೂ ಆಕೆಯ ಪತಿ ದೆಹಲಿಯಿಂದ ದಾಮೋಹ್ ಗೆ ರೈಲಿನಲ್ಲಿ ಪ್ರಾಯಾಣಿಸುತ್ತಿದ್ದರು. ಈಸಂದರ್ಭದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಇದನ್ನು ಗಮನಿಸಿದ ಹಣ್ಣಿನ ವ್ಯಾಪಾರಿ ತನ್ವೀರ್ ಮಿರ್ಜಾ ಎಂಬುವವರು ಮಹಿಳೆಯ ಸಹಾಯಕ್ಕಾಗಿ ಧಾವಿಸಿ ಎಂದು ರೈಲ್ವೆ ಇಲಾಖೆಗೆ ಟ್ವೀಟ್ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೇವಲ 20 ನಿಮಿಷಗಳಲ್ಲಿ ವೈದ್ಯತ ತಂಡ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದೆ. ವೈದ್ಯರ ಚಿಕಿತ್ಸೆಯ ನೆರವಿನಿಂದ ಮಹಿಳೆಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.







