6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್
ತಮಿಳುನಾಡು : 6 ದಿನದ ಹಿಂದೆ ಜನಿಸಿದ್ದ ಜವಜಾತ ಶಿಶುವನ್ನ ಹೆತ್ತವರೇ ಮಣ್ಣಿನಲ್ಲಿ ಹೂತು ಪರಾರಿಯಾಗಿರುವ ಅಮಾನವೀಯ ಘಟನೆಯು ತಮಿಳುನಾಡಿನಲ್ಲಿ ನಡೆದಿದೆ.. ಹೆಣ್ಣು ಮಗು ಎಂಬ ಕಾರಣಕ್ಕೇ ಮಗುವನ್ನ ಹೂತಿರುವ ಶಂಕೆ ವ್ಯಕ್ತವಾಗಿದೆ.. ನವಜಾತ ಶಿಶುವನ್ನು ಗುಟ್ಟಾಗಿ ಹೂತಿರುವ ಕ್ರೂರ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ.. ಘಟನೆ ಮಧುರೈನಲ್ಲಿ ನಡೆದಿದೆ.
ಮುತ್ತುಪಾಂಡಿ ಮತ್ತು ಕೌಸಲ್ಯ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿಗೆ ಡಿ.21ರಂದು ತಮಿಳುನಾಡಿನ ಮಧುರೈ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗು ಜನಿಸಿತ್ತು. ಡಿ.36ರಂದು ಗ್ರಾಮದ ನರ್ಸ್, ಮಗುವಿನ ಆರೋಗ್ಯವನ್ನು ವಿಚಾರಿಸಲು ಮನೆಗೆ ಬಂದ ವೇಳೆ ಮಗು ಕಾಣಿಸಿಲ್ಲ.. ಅದನ್ನ ವಿಚಾರಿಸಿದಾಗ ಮಗು ಸಾವನಪ್ಪಿತ್ತು.. ಹೀಗಾಗಿ ಸಮಾಧಿ ಮಾಡಿದ್ದೇವೆ ಎಂದಿದ್ದಾರೆ.. ಆದ್ರೆ ಇದ್ರಿಂದ ಅನುಮಾನಗೊಂಡ ನರ್ಸ್ ಪಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ..
ಇನ್ನೂ ನವಜಾತ ಶಿಶು ಮೃತಪಟ್ಟಿರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೇ ಹೂತು ಹಾಕಿರುವ ಹಿನ್ನೆಲೆಯಲ್ಲಿ ಹೆಣ್ಣು ಶಿಶು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ನಡೆಸುತ್ತಿದ್ದಾರೆ.