Madhya Pradesh : ನಾಲ್ಕು ಕಾಲುಗಳೊಂದಿಗೆ ಜನಿಸಿದ ಹೆಣ್ಣು ಮಗು….
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಹಿಳೆಯೊಬ್ಬಳು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗ್ವಾಲಿಯರ್ ನ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬುವವರು ನಾಲ್ಕು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ನಾಲ್ಕು ಕಾಲುಗಳಿದ್ದು ಆಕೆಗೆ ದೈಹಿಕೆ ಅಂಗವಿಕಲತೆ ಇದೆ. ಹೆಚ್ಚುವರಿ ಬ್ರೂಣದಿಂದಾಗಿ ಈ ರೀತಿ ಉಂಟಾಗುತ್ತದೆ. ವೈದ್ಯಕೀಯ ವಿಜ್ಞಾನ ಭಾಷೆಯಲ್ಲಿ ಇದಕ್ಕೆ ಇಶಿಯೋಪಾಗಸ್ ಎಂದು ಕರೆಯುತ್ತೇವೆ ಎಮದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಟ್ ವೈದ್ಯ ಡಾ. ಆರ್ ಕೆ ಎಸ್ ಧಕಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೆಚ್ಚುವರಿಯಾಗಿರುವ ಕಾಲುಗಳು ನಿಷ್ಕ್ರಿಯಗೊಂಡಿದ್ದು ವೈದ್ಯರು ಆಪರೇಷನ್ ಮೂಲಕ ಹೆಚ್ಚುವರಿ ಕಾಲುಗಳನ್ನ ತೆಗೆಯಲಿದ್ದಾರೆ. ನಂತರ ಆಕೆ ಸಾಮನ್ಯಳಂತೆ ನಡೆದಾಡಬಹುದು ಎಂದು ಡಾ ಧಕಡ್ ತಿಳಿಸಿದ್ದಾರೆ.
Baby Girl In Madhya Pradesh Born With ‘Four’ Legs








