Bachelor Party | ಮತ್ತೆ ಒಂದಾದ ರಕ್ಷಿತ್ – ರಿಷಬ್ | ಬ್ಯಾಚುಲರ್ ಪಾರ್ಟಿ ಸಿನಿಮಾ
ರಿಷಬ್, ದಿಗಂತ್, ಅಚ್ಯುತ್ ನಟನೆಯ ಸಿನಿಮಾ
ಅಭಿಜಿತ್ ಮಹೇಶ್ ನಿರ್ದೇಶನದ ಸಿನಿಮಾ
ರಕ್ಷಿತ್ ಶೆಟ್ಟಿ ಬಂಡವಾಳದ ಸಿನಿಮಾ
ಸ್ಯಾಂಡಲ್ವುಡ್ ನಟ ಹಾಗೂ ನಿರ್ದೇಶಕರಾಗಿ ಕೆಲಸ ಮಾಡಿರುವ ರಕ್ಷಿತ್ ಶೆಟ್ಟಿ ಹಾಗೂ ರಿಷಭ್ ಇದೀಗ ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಈ ಸಿನಿಮಾಗೆ ‘ಬ್ಯಾಚುಲರ್ ಪಾರ್ಟಿ’ ಎಂದು ಹೆಸರಿಡಲಾಗಿದೆ. ಪರಂವಾಹ್ ಸ್ಟುಡಿಯೋಸ್ ಪ್ರೊಡಕ್ಷನ್ ಸಿನಿಮಾ ಇದಾಗಿದ್ದು, ಜಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಬಂಡವಾಳ ಹೂಡುತ್ತಿರುವ ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ದಿಗಂತ್ ಮಂಚಾಲೆ ಹಾಗೂ ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ.

ಇದೊಂದು ಅಡ್ವೆಂಜರ್ ಕಾಮಿಡಿ ಸಿನಿಮಾ ಎಂದು ಚಿತ್ರತಂಡ ಘೋಷಿಸಿದೆ. ರಕ್ಷಿತ್ ಶೆಟ್ಟಿ ಆಪ್ತ ಅಭಿಜಿತ್ ಮಹೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.
1984ರಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದ ಸಿನಿಮಾ ಬ್ಯಾಚುಲರ್ ಪಾರ್ಟಿ ದೊಡ್ಡ ಸದ್ದು ಮಾಡಿತ್ತು.
ಈಗ ಕನ್ನಡದಲ್ಲಿ ಸೇಮ್ ಟೈಟಲ್ ಇಟ್ಟುಕೊಂಡು ರಿಷಬ್ ಮತ್ತು ರಕ್ಷಿತ್ ಸಿನಿಮಾ ಮಾಡಲು ಹೊರಟಿದ್ದಾರೆ.
ಇದು ಅಭಿಜಿತ್ ಮಹೇಶ್ ಅವರು ಚೊಚ್ಚಲ ಸಿನಿಮಾವಾಗಿದ್ದು ಭಾರಿ ಕುತೂಹಲ ಕೆರಳಿಸಿದೆ.