ಬಾಗಿಲು ತರೆದ ಬದರಿನಾಥ ದೇವಾಲಯ | ಶ್ರೀ ಮಹಾವಿಷ್ಣುವಿನ ದರ್ಶನ ಪಡೆದ ಭಕ್ತರು
ಉತ್ತರಾಖಂಡ: ಚಾರ್ ಧಾಮ್ ಗಳಲ್ಲಿ ಚಾರ್‌ಧಾಮ್‌ಗಳಲ್ಲಿ ಒಂದಾದ ಬದರಿನಾಥ ದೇವಾಲಯದ ಬಾಗಿಲನ್ನು ವೇದ, ಮಂತ್ರ ಪಠಣಗಳೊಂದಿಗೆ ತೆರೆಯಲಾಗಿದೆ.
ದೇವಾಲಯದ ಬಾಗಿಲು ತೆರೆಯುವ ವೇಳೆ ಸಾವಿರಾರು ಜನ ಭಕ್ತರ ಸಮೂಹ ನೆರದಿತ್ತು. ಇನ್ನೂ ದೇವಾಲಯದ ಬಾಗಿಲ ಆರು ತಿಂಗಳಿಂದ ಬಂದಾಗಿತ್ತು. ಇಂದು ದೇವಾಲಯ ಬಾಗಿಲು ತರೆದಿದ್ದು, ದೇವಾಲಯ ಹೂವು, ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ. ಪೊಲೀಸ್ ಅಧಿಕಾರಿಗಳ ಬಿಗಿ ಭದ್ರತೆಯಲ್ಲಿ ಇಂದು ದೇವಾಲಯದ ಬಾಗಿಲು ತೆರೆಯಲಾಯಿತು.
#WATCH | Uttarakhand: The doors of Badrinath Dham opened for devotees with rituals and chanting and the tunes of army band with a large number of devotees present in Badrinath Dham. pic.twitter.com/LiCTexcbJu
— ANI UP/Uttarakhand (@ANINewsUP) May 8, 2022
ಅಲಕನಂದಾ ನದಿಯ ದಡದಲ್ಲಿ ಚಮೋಲಿ ಜಿಲ್ಲೆಯ ಗರ್ವಾಲ್ ಬೆಟ್ಟಗಳ ನಡುವೆ ನೆಲೆಗೊಂಡಿರುವ ಬದರಿನಾಥ ದೇವಾಲಯವು ಶ್ರೀ ಮಹಾ ವಿಷ್ಣುವಿಗೆ ಸಮರ್ಪಿತವಾಗಿದೆ. ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳನ್ನು ಒಳಗೊಂಡಿರುವ ‘ಚಾರ್ ಧಾಮ್’ ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಈ ದೇವಾಲಯವು ಒಂದಾಗಿದೆ.
ಈಗಾಗಲೇ ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥ ದೇವಾಲಯದ ಬಾಗಿಲುಗಳು ತೆರೆದಿದ್ದು, ದೇವರ ದರ್ಶನಕ್ಕಾಗಿ ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಚಾರ್ ಧಾಮ್‌ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ. ಪ್ರತಿದಿನ ಒಟ್ಟು 15,000 ಯಾತ್ರಾರ್ಥಿಗಳಿಗೆ ಬದರಿನಾಥ, 12,000 ಕೇದಾರನಾಥ, 7,000 ಗಂಗೋತ್ರಿ ಮತ್ತು 4,000 ಯಮುನೋತ್ರಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.