Bagalakote : ಕೃಷ್ಣಾರತಿ ನೆರವೇರಿಸಿದ ನೂತನ ಪೀಠಾಧಿಕಾರಿಗಳು
ಬಾಗಲಕೋಟೆ : ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠದ ಪೀಠಾರೋಹಣ ಹಿನ್ನೆಲೆ. ನೂತನ ಪೀಠಾಧಿಪತಿಗಳಿಗೆ ರುದ್ರಾಭೀಶೇಕ ನೆರವೇರಿಸಲಾಯಿತು.. ಇನ್ನೂ ನೂತನ ಪೀಠಾಧಿಪತಿಗಳು ಕೃಷ್ಣಾ ರತಿ ಕಾರ್ಯಕ್ರಮ ನೆರವೇರಿಸಿದರು…
ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರದಲ್ಲಿ ಕೃಷ್ಣಾರತಿ ನೆರವೇರಿಸಲಾಗಿದೆ… ನೂತನ ಪೀಠಾಧಿಪತಿ ಡಾ.ಮಹದೇವ ಶಿವಾಚಾರ್ಯಶ್ರೀಗಳು ಕೃಷ್ಣಾರತಿ ನೆರವೇರಿಸಿದರು…
ಈ ವೇಳೆ ಹರಿಹರ ಪೀಠದ ವಚಬಾನಂದ ಶ್ರೀ,ಸಚಿವ ಮುರಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ,ಶ್ರೀ ಸಂಗನಬಸವ ಶ್ರೀ,ಪಂಚಮಸಾಲಿ ಪರ್ಯಾಯ ಒಕ್ಕೂಟದ ಶ್ರೀಗಳು ಭಾಗಿಯಾಗಿದ್ದರು..
ಪೀಠಾರೋಹಣ ಕಾರ್ಯಕ್ರಮದ ಧರ್ಮಸಭೆ ಆರಂಭ ನೆರವೇರಿದೆ… ಕಾರ್ಯಕ್ರಮಕ್ಕೆ ನೂತನ ಪೀಠಾಧಿಪತಿ ಜಗದ್ಗುರು ಮಹದೇವ ಶಿವಾಚಾರ್ಯ ಸ್ವಾಮೀಜಿ, ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ವಿವಿಧ ಮಠಾಧೀಶರು ಆಗಮಿಸಿದ್ದರು…
ನೂತನ ಪೀಠಾಧಿಪತಿ ಹಾಗೂ ಮುರುಗೇಶ್ ನಿರಾಣಿ ಅವರಿಗೆ ಒಂದು ಕ್ವಿಂಟಲ್ ಬಾರದ ಬೃಹತ್ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ ಮಾಡಲಾಗಿದೆ..
ಗದಗ ಜಿಲ್ಲೆ ದಿಂಗಾಲೇಶ್ವರ ಮಠ ಸ್ವಾಮೀಜಿ ಸೇರಿದಂತೆ ನಾಡಿನ ನೂರಕ್ಕೂ ಅಧಿಕ ಹರಗುರು ಚರಮೂರ್ತಿಗಳು, ಮಠಾಧೀಶರು ಭಾಗಿ.ಯಾಗಿದ್ದರು..