ಕೊರೊನಾ ಆತಂಕದ ನಡುವೆಯೇ ಇಡೀ ದೇಶಾದ್ಯಂತ ಅತ್ಯಂತ ಶ್ರದ್ಧೆ ಭಕ್ತಿಂದ ಹಿಂದೂಗಳು ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿದ್ರೆ. ಮತ್ತೊಂದೆಡೆ ಮುಸ್ಲಿಂ ಬಾಂಧವರು ಮಸೀದಿಗೆ ತೆರಳಿ ಸುರಕಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಂಜಾನೆ 6 ಗಂಟೆಯಿಂದಲೇ ಎಲ್ಲಾ ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿತ್ತು. ಅದರಂತೆ ತಂಡಗಳಾಗಿ ತೆರಳಿದ ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ಮಾಡಿರುವ ದೃಷ್ಯಗಳು ಕಂಡುಬಂದಿವೆ. ಪ್ರತಿ ಬಾರಿ ಬಕ್ರೀದ್ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಹಬ್ಬದ ವಾತಾವರಣ ಕಳೆಗಟ್ಟುತ್ತಿತ್ತು. ಈ ಬಾರಿ ಕೊರೊನಾ ಬಿಕ್ಕಟ್ಟಿನಿಂದಾಗಿ ಮಸೀದಿಗಳಲ್ಲಿ ಅಷ್ಟಾಗಿ ಜನದಟ್ಟಣೆ ಕಂಡುಬಂದಿಲ್ಲ. ಸರಳವಾಗಿ ಬಕ್ರೀದ್ ಹಬ್ಬವನ್ನು ಇಡೀ ದೇಶದ ಜನರು ಆಚರಣೆ ಮಾಡಿದ್ದಾರೆ.
ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!
ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...








