ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಚುನಾವಣಾ ಆಯೋಗ ಮಹತ್ವದ ಸ್ಪಷ್ಟನೆ ನೀಡಿದೆ. ಹಲವು ಬಾರಿ ಇವಿಎಂ ಕಾರ್ಯವೈಖರಿ ಬಗ್ಗೆ ಆರೋಪ ಮಾಡ್ತಿದ್ದ ರಾಜಕೀಯ ಪಕ್ಷಗಳ ಕುರಿತು, ಈಗಾಗಲೇ ಇವಿಎಂ ಹ್ಯಾಕಿಂಗ್ ಅಸಾಧ್ಯ ಎಂದು ಸಾಭೀತಾಗಿದೆ. ಮುಂದಿನ ಯಾವುದೇ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ತಿಳಿಸಿದ್ದಾರೆ. ಇವಿಎಂಗಳ ಕಾರ್ಯವೈಖರಿ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಇದ್ದಾಗಲೇ ಈ ಸ್ಪಷ್ಟನೆ ನೀಡಿದ್ದು, ಮುಂಬರುವ ಇಪ್ಪತ್ತು ವರ್ಷಗಳ ಕಾಲ ಇದೇ ಇವಿಎಂ ಗಳನ್ನು ಬಳಸಬಹುದು ಎಂದಿದ್ದಾರೆ. ಈ ಮೂಲಕ ಮತ್ತೆ ಬ್ಯಾಲೆಟ್ ಪೇಪರ್ ಎಲೆಕ್ಷನ್ ಬೇಕು, ಇವಿಎಂ ಬೇಡವೇ ಬೇಡ ಎನ್ನುತ್ತಿದ್ದ ರಾಜಕೀಯ ಪಕ್ಷಗಳಿಗೆ ಹಿನ್ನಡೆಯಾದಂತಾಗಿದೆ.
2027ರ ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿ ಆರಂಭ: ನವೆಂಬರ್ 11ರೊಳಗೆ ವಿದ್ಯಾರ್ಥಿಗಳ ವಿವರ ಸಲ್ಲಿಸಲು KSEAB ಸೂಚನೆ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2027ರ ಎಸ್ಎಸ್ಎಲ್ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ರಾಜ್ಯದ ಮಾನ್ಯತೆ ಪಡೆದ ಸರ್ಕಾರಿ, ಅನುದಾನಿತ ಹಾಗೂ...








