ಟಿಕ್ ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ಬ್ಯಾನ್…

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ ಚೀನಾ ದೇಶದ ಸುಮಾರು 59 ಮೊಬೈಲ್ ಅಪ್ ಗಳನ್ನೂ ಬ್ಯಾನ್ ಮಾಡಲು ಆದೇಶ ನೀಡಿದೆ. ಇತ್ತೀಚಿಗೆ ಚೀನಾ ಆರ್ಮಿ ನಮ್ಮ ದೇಶದ ಸೈನಿಕರ ಮೇಲೆ ಮಾರಣಾಂತಿಕ ದಾಳಿ ಮಾಡಿ 20 ಸೈನಿಕರು ವೀರಮಣವಪ್ಪಿದರು. “ಭಾರತ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತ” ವಾಗಿ ಕಾಡುತಿದ್ದ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.

ಟಿಕ್ ಟೋಕ್, ಯುಸಿ ಬ್ರೌಸರ್ ಮತ್ತು ಇತರ ಚೀನೀ ಅಪ್ಲಿಕೇಶನ್‌ಗಳಂತಹ ಅಪ್ಲಿಕೇಶನ್‌ಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಜೂನ್ 15 ರಂದು ಲಡಾಖ್‌ನಲ್ಲಿ ನಡೆದ ಘರ್ಷಣೆಯ ನಂತರ ಚೀನಾದೊಂದಿಗಿನ ಉದ್ವಿಗ್ನತೆಯ ಮಧ್ಯೆ ಈ ಕ್ರಮ ಕೈಗೊಂಡಿದ್ದು, ಇದರಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈಗಾಗಲೇ ದೇಶದಲ್ಲಿ “ಬ್ಯಾನ್ ಚೀನಾ ಚಳುವಳಿ” ನಡೆಯುತ್ತಿದ್ದು ಸರಕಾರ ಈ ಕ್ರಮ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಒಟ್ಟಿನಲ್ಲಿ ಕಾಲ್ಕೆರೆದು ಗಡಿ ವಿಚಾರದಲ್ಲಿ ಭಾರತದ ತಂಟೆಗೆ ಬಂದ ಚೀನಾಕ್ಕೆ ಸರಕಾರಕ್ಕೆ ಸರಿಯಾದ ಚಾಟಿ ಏಟನ್ನೇ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರ ತೆಗೆದುಕೊಂಡರು ಅಚ್ಚರಿ ಇಲ್ಲ.

 

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This