BAN v IND ODI Series : 3ನೇ ಪಂದ್ಯದಿಂದ ರೋಹಿತ್, ಚಹರ್ ಹಾಗೂ ಕುಲ್ದೀಪ್ ಸೆನ್ ಔಟ್
ಅತಿಥೇಯ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸುವ ಮೂಲಕ ಸರಣಿ ಸೋಲು ಕಂಡಿರುವ ಟೀಂ ಇಂಡಿಯಾಕ್ಕೆ ಗಾಯದ ಸಮಸ್ಯೆ ಸಹ ಎದುರಾಗಿದೆ. ಹೀಗಾಗಿ ಸರಣಿಯ 3ನೇ ಪಂದ್ಯದಿಂದ ನಾಯಕ ರೋಹಿತ್ ಶರ್ಮ, ವೇಗದ ಬೌಲರ್ಗಳಾದ ದೀಪಕ್ ಚಹರ್ ಹಾಗೂ ಕುಲ್ದೀಪ್ ಸೆನ್ ತಂಡದಿಂದ ಹೊರಗುಳಿದಿದ್ದಾರೆ.
ಢಾಕಾದಲ್ಲಿ ಬುಧವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮ ಗಾಯದ ಸಮಸ್ಯೆಗೆ ತುತ್ತಾದರು. ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ರೋಹಿತ್ ಶರ್ಮ ಬೆರಳಿಗೆ ತಗುಲಿದ ಪರಿಣಾಮ ರೋಹಿತ್ ಗಾಯಗೊಂಡು ಮೈದಾನದಿಂದ ಹೊರ ನಡೆದರು. ಅಲ್ಲದೇ ಬ್ಯಾಟಿಂಗ್ನಿಂದಲೂ ಹೊರಗುಳಿದಿದ್ದ ಹಿಟ್ಮ್ಯಾನ್, ತಂಡಕ್ಕೆ ಅಗತ್ಯ ಇದ್ದ ಕಾರಣದಿಂದಾಗಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು.
ಈ ನಡುವೆ ತಮ್ಮ ಗಾಯದ ಸಮಸ್ಯೆ ಕುರಿತು ಈಗಾಗಲೇ ಪ್ರಾಥಮಿಕ ಚಿಕಿತ್ಸೆ ಪಡೆದಿರುವ ರೋಹಿತ್ ಶರ್ಮ, ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಹಿಂದಿರುಗಲಿದ್ದಾರೆ. ಹೀಗಾಗಿ ಸರಣಿಯ ಮೂರನೇ ಏಕದಿನ ಪಂದ್ಯದಿಂದ ರೋಹಿತ್ ಹೊರಗುಳಿಯಲಿದ್ದು, ಟೆಸ್ಟ್ ಸರಣಿಯಲ್ಲಿ ಆಡುವ ಕುರಿತಂತೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ರೋಹಿತ್ ಶರ್ಮ ಜೊತೆಗೆ ವೇಗಿಗಳಾದ ದೀಪಕ್ ಚಹರ್ ಹಾಗೂ ಕುಲ್ದೀಪ್ ಸೆನ್ ಸಹ ಗಾಯದ ಸಮಸ್ಯೆಗೆ ಸಿಲುಕಿದ್ದು, ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಬಾಂಗ್ಲಾದೇಶ ಹಾಗೂ ಭಾರತ ನಡುವಿನ 3ನೇ ಪಂದ್ಯ ಡಿ.10ರಂದು ನಡೆಯಲಿದ್ದು, ಪ್ರಮುಖ ಪ್ಲೇಯರ್ಗಳ ಅನುಪಸ್ಥಿತಿ ಹಿನ್ನೆಲೆಯಲ್ಲಿ ಭಾರತದ ಪ್ಲೇಯಿಂಗ್ ಇಲವೆನ್ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.