BAN vs IND : ಬಾಂಗ್ಲಾದೇಶದ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ರಸೆಲ್
ಭಾರತ ವಿರುದ್ಧದ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ರಸೆಲ್ ಡೊಮಿಂಗೊ, ಬಾಂಗ್ಲಾದೇಶ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಈ ಹಿಂದೆ ತಂಡದ ಕೋಚ್ ಆಗಿದ್ದ ಸ್ಟೀವ್ ರೋಡ್ಸ್ ಅವರು ತಂಡದ ಕೋಚ್ ಹುದ್ದೆಯಿಂದ ಸೆಪ್ಟೆಂಬರ್ 2019ರಲ್ಲಿ ಕೆಳಗಿಳಿದ ನಂತರದಲ್ಲಿ ರಸೆಲ್ ಡೊಮಿಂಗೊ ಅವರು ಬಾಂಗ್ಲಾದೇಶ ತಂಡದ ಮುಖ್ಯ ಕೋಚ್ ಆಗಿ ನಿಯೋಜನೆಗೊಂಡಿದ್ದರು. ದಕ್ಷಿಣ ಆಫ್ರಿಕಾ ಮೂಲದ ಡೊಮಿಂಗೊ ಅವರು 2023ರ ಏಕದಿನ ವಿಶ್ವಕಪ್‌ವರೆಗೂ ಬಾಂಗ್ಲಾ ತಂಡದ ಕೋಚ್ ಆಗಿ ಉಳಿಯುವ ನಿರೀಕ್ಷೆ ಹೊಂದಲಾಗಿತ್ತು.
ಆದರೆ ಭಾರತ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಡೊಮಿಂಗೊ ಅವರು ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಲಾಲ್ ಯೂನಸ್, ಕೋಚ್ ರಸೆಲ್ ಡೊಮಿಂಗೊ ಮಂಗಳವಾರ ತಮ್ಮ ರಾಜೀನಾಮೆ ಪತ್ರ ಕಳುಹಿಸಿದ್ದು, ತತಕ್ಷಣದಿಂದ ಜಾರಿಗೆ ಬರುವಂತೆ ಕೋಚ್ ಸ್ಥಾನದಿಂದ ಕೆಳಗಿಳಿದ್ದಾರೆ ಎಂದು ತಿಳಿಸಿದ್ದಾರೆ.
ಡೊಮಿಂಗೊ ಅವರ ಮಾರ್ಗದರ್ಶನದಲ್ಲಿ ಬಾಂಗ್ಲಾದೇಶ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡವನ್ನ ಸೋಲಿಸಿ ಸರಣಿ ಗೆದ್ದಿತ್ತು. ಅಲ್ಲದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನ ಸೋಲಿಸಿತು. ಅಲ್ಲದೇ ಸೌತ್ ಆಫ್ರಿಕಾ ಹಾಗೂ ಭಾರತದ ವಿರುದ್ಧ ODI ಸರಣಿಯಲ್ಲಿ ಗೆಲುವು ಸಾಧಿಸಿತ್ತು.