ಯಾವುದೇ ಕಾರಣಕ್ಕೂ ಬಂದ್ ವಾಪಸ್ ಇಲ್ಲ : ವಾಟಾಳ್ ನಾಗರಾಜ್ Vatal Nagaraj saaksha tv
ಬೆಳಗಾವಿ : ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಆಗಲಿದೆ. ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಇರಬಾರದು.
ಎಂಇಎಸ್ ಮಹಾರಾಷ್ಟ್ರ ದಲ್ಲಿ ಇರಬೇಕು ಬೆಳಗಾವಿಯಲ್ಲಿ ಅಲ್ಲ ಎಂದು ಆಕ್ರೋಶ ಹೊರಹಾಕಿದರು. ರಾಜ್ಯೋತ್ಸವ ದಿನ ಕರಾಳ ದಿನ, ಅಧಿವೇಶನ ಸಂದರ್ಭದಲ್ಲಿ ಮಹಾಮೇಳ ನಡೆಸುತ್ತದೆ.
ರಾಯಣ್ಣ ಮೂರ್ತಿ ಭಗ್ನ ಮಾಡ್ತಾರೆ. ಕನ್ನಡ ಧ್ವಜವನ್ನ ಸುಟ್ಟು ಹಾಕ್ತಾರೆ. ಎಂಇಎಸ್ ನಿಷೇಧಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
ಎಂಇಎಸ್ ನಿಷೇಧಿಸುವಂತೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿ ಕೇಂದ್ರ ದ ಗಮನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಇನ್ನು ಎಂಇಎಸ್ ನಿಷೇಧಿಸುವಂತೆ ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಆಗಲಿದೆ. ಕರ್ನಾಟಕ ಬಂದ್ ಕರೆಕೊಟ್ಟ ಉದ್ದೇಶ ಮುಖ್ಯವಾಗುತ್ತದೆ.
ಡಿಸೆಂಬರ್31 ರ ಬೆಳಗ್ಗೆಯಿಂದಲೇ ಸಂಜೆ 6 ಗಂಟೆ ವರೆಗೂ ಬಂದ್ ನಡೆಯಲಿದೆ. ಬಂದ್ ಕರೆ ಕೊಟ್ಟಿದ್ದರಿಂದ ಬಂದ್ ನಡೆಯಲಿದೆ.
31 ರ ಬಂದ್ ಸೂರ್ಯ ಇಕಡೆ ಬಂದು, ಚಂದ್ರ ಆ ಕಡೆ ಹೋದ್ರು ಕರ್ನಾಟಕ ಬಂದ್ ನಡೆಯಲಿದೆ ಎಂದು ಸ್ಪಷ್ಟನೆ ಕೊಟ್ಟರು.