ಸಿನಿಮಾ ಜನರಿಗೆ ಈಗ ಸುಗ್ಗಿಯ ಕಾಲ ಎನ್ನುವಂತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ರಿಲೀಸ್ ಆಗುತ್ತಿದ್ದು, ಜನರು ಇಷ್ಟ ಪಡುತ್ತಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮಾ’, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಆಚಾರ್ ಆ್ಯಂಡ್ ಕೋ’, ‘ಜೈಲರ್’, ‘ಗದರ್ 2’, ‘ಒಎಂಜಿ 2’ ಸೇರಿದಂತೆ ಹಲವು ಸಿನಿಮಾಗಳು ತೆರೆಗೆ ಅಪ್ಪಳಿಸಿ, ಭರ್ಜರಿ ಸದ್ದು ಮಾಡುತ್ತಿವೆ.
ಇದರ ಮಧ್ಯೆ ಈ ವಾರ (ಆಗಸ್ಟ್ 18) ಒಂದಷ್ಟು ನಿರೀಕ್ಷಿತ ಚಿತ್ರಗಳು ಬರುತ್ತಿವೆ. ಕನ್ನಡದಲ್ಲಿ ‘ಬ್ಯಾಂಗ್’ (Baang) ಮತ್ತು ‘ಕ್ಷೇತ್ರಪತಿ’ ಸಿನಿಮಾ (Kshetrapathi Movie) ಬಿಡುಗಡೆಗೆ ಸಿದ್ಧವಾಗಿವೆ. ಬೇರೆ ಬೇರೆ ಕಾರಣಗಳಿಂದ ಈ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.








