ಕೊರೊನಾ 4ನೇ ಅಲೆ ಸೋಂಕು ಹರಡುವಿಕೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ
ನವದೆಹಲಿ: ದೇಶದಲ್ಲಿ ಕೊರೊನಾ 4ನೇ ಅಲೆಯ ಸೋಂಕು ಹರಡುತ್ತಿದ್ದು, ದೇಶದ 5 ಮಹಾನಗರಗಳ್ಳಿ ಸೋಂಕು ಹೆಚ್ಚಾಗಿದ್ದು, ಬೆಂಗಳೂರು ಕೊರೊನಾ ಹರಡುವಿಕೆಯಲ್ಲಿ 2ನೇ ಸ್ಥಾನದಲ್ಲಿದೆ.
5 ಮಹಾನಗರದಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರು 2ನೇ ಸ್ಥಾನದಲ್ಲಿದೆ. ಉಳಿದ ಹಾಗೇ ಮುಂಬೈ, ಚೆನ್ನೈ, ಕೋಲ್ಕತ್ತಾ 3,4,5 ಸ್ಥಾನದಲ್ಲಿದೆ. ಈ 5 ಮಹಾನಗರಗಳಲ್ಲಿ 2 ಮಹಾನಗರಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಕೇಸ್ ದಾಖಲಾಗುತ್ತಿವೆ.
ದೆಹಲಿಯಲ್ಲಿ 4,508 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಲೂರಿನಲ್ಲಿ 1,648, ಮುಂಬೈನಲ್ಲಿ 549, ಚೆನ್ನೈನಲ್ಲಿ 255 ಕೇಸ್, ಕೊಲ್ಕತ್ತಾದಲ್ಲಿ 272 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ಇನ್ನೂ ಬೆಂಗಳೂರಿನಲ್ಲಿ 5-12 ವರ್ಷದ 4 ಲಕ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ನಿರ್ಧರಿಸಿದ್ದು, ಕೇಂದ್ರದಿಂದ ಲಸಿಕೆ ನೀಡಲು ಗೈಡ್ ಲೆನ್ಸ್ ಬಂದ ಕೂಡಲೇ ಲಸಿಕೆ ನೀಡಲು ಪ್ರಾರಂಭಿಸಲಾಗುತ್ತದೆ. ಈಗಾಗಲೇ ಆಯಾ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ನೀಡಲು ಬಿವಿಎಂಪಿ ತಯಾರಿ ಮಾಡಿಕೊಂಡಿದೆ.
ಹಾಗೇ ಭಾರತದಲ್ಲಿ ಕರೊನಾಕ್ಕೆ 5.22ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರಕಾರ ಅಧಿಕೃತವಾಗಿ ಹೇಳಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು 40 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದೆ. ಆದರೆ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಮೇ 5 ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸಾವಿನ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ.