Bangalore | ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ
ಬೆಂಗಳೂರು : ನಗರದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನವಾಗಿದೆ.
ಹೈ ಗ್ರೌಂಡ್ ಪೊಲೀಸರಿಂದ 8 ಜನ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಗೋವಿಂದ ಸ್ವಾಮಿ, ಮಾಧು, ವೆಂಕಟೇಶ, ರಾಮಚಂದ್ರ, ವಾಸಿಂ ಬೇಗ್, ರಾಮಚಂದ್ರಪ್ಪ, ನಂಜೇಗೌಡ, ವರದರಾಜು ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಹೈ ಗ್ರೌಂಡ್ ಪೊಲೀಸ್ ಠಾಣೆಯ ಗಾಲ್ಫ್ ಕ್ಲಬ್ ನಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳಿಂದ 3 ಕೋಟಿಗೂ ಅಧಿಕ ಮೌಲ್ಯದ ಶ್ರೀಗಂಧ ಮರ ಮತ್ತು ಚಕ್ಕೆಗಳು, ಶ್ರೀಗಂಧ ಆಯಿಲ್ ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳು ನಾಲ್ಕು ವರ್ಷಗಳಿಂದ ಗ್ಯಾಂಗ್ ಬೆಂಗಳೂರು ಸದಾಶಿವನಗರ, ಕೆ ಆರ್ ಪುರ , ಜಯನಗರ ,ಆನೇಕಲ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ.
ಶ್ರೀಗಂಧ ಮರಗಳನ್ನು ತುಮಕೂರು ಗಡಿಭಾಗದಲ್ಲಿ ಮಿಲ್ ನಲ್ಲಿ ಆಯಿಲ್ ಆಗಿ ಪರಿವರ್ತನೆ ಮಾಡುತ್ತಿದ್ರು.
ಮರಕಳ್ಳತನ, ಮಧ್ಯವರ್ತಿ ಮತ್ತು , ಶ್ರೀಗಂಧ ಮರ ಗುರುತಿಸುವ ತಂಡ ಹೀಗೆ ಮೂರು ತಂಡಗಳಾಗಿ ಇವರು ಕಳ್ಳತನ ಮಾಡುತ್ತಿದ್ದರಂತೆ.
ಆರೋಪಿಗಳನ್ನು ತಮಿಳುನಾಡಿನ ತಿರುಪತ್ತೂರು ಮೂಲದವರು ಎಂದು ಹೇಳಲಾಗುತ್ತಿದೆ.








