Bangalore | ನಾಯಿ ಬೊಗಳಿದ್ದಕ್ಕೆ ಗುಂಡಿಕ್ಕಿ ಕೊಲೆ
ಬೆಂ.ಗ್ರಾ.ದ ಮಾದಗೊಂಡನಹಳ್ಳಿಯಲ್ಲಿ ಘಟನೆ
ಏರ್ ಗನ್ ಮೂಲಕ ಶೂಟ್ ಮಾಡಿದ ಭೂಪ
ಕೃಷ್ಣಪ್ಪ ಎಂಬಾತನಿಂದ ನಾಯಿಯ ಕೊಲೆ
“ನನ್ನ ಮಗನನ್ನು ಕಚ್ಚಿದೆ, ಅದಕ್ಕೆ ಕೊಂದೆ”
ದೊಡ್ಡಬಳ್ಳಾಪುರ : ತನ್ನನ್ನು ನೋಡಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ನಾಯಿಗೆ ಗುಂಡಿಕ್ಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ನಡೆದಿದೆ.
ಮಾದಗೊಂಡನಹಳ್ಳಿ ನಿವಾಸಿ ಹರೀಶ್ ಎಂಬುವವರು ನಾಯಿಯನ್ನು ಸಾಕಿದ್ದರು.
ಇದೇ ಗ್ರಾಮದ ಕೃಷ್ಣಪ್ಪ ಎಂಬಾತ ನಾಯಿ ತನ್ನನ್ನು ನೋಡಿ ಬೊಗಳಿತೆಂದು ಏರ್ ಗನ್ ನಿಂದ ಶೂಟ್ ಮಾಡಿದ್ದಾನೆ.

ಈ ವೇಳೆ ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿ ಶೂಟ್ ಮಾಡಿದ್ದಾನೆ. ಗುಂಡೇಟಿಗೆ ನಾಯಿ ಮೃತಪಟ್ಟಿದೆ.
ಈ ಕುರಿತು ಪ್ರಶ್ನಿಸಿದ್ದಕ್ಕೆ ನನ್ನ ಮಗನನ್ನು ಕಚ್ಚಿದೆ, ಅದಕ್ಕೆ ನಾಯಿಯ ಕೊಂದೆ ಎಂದು ಕೃಷ್ಣಪ್ಪ ಹೇಳಿದ್ದಾರೆ.
ಇತ್ತ ಹರೀಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪ್ರಾಣಿ, ಪಕ್ಷಿ ದಸೋಹ ಟ್ರಸ್ಟ್ ನವರು ಭೇಟಿ ನೀಡಿದ್ದಾರೆ.