Bangalore Amrit city Developement | ಕಾವೇರಿಪುರ ವಾರ್ಡಿನಲ್ಲಿ ಅಮೃತ್ ನಗರೋತ್ಥಾನ ಕಾಮಗಾರಿಗಳಿಗೆ ಚಾಲನೆ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾವೇರಿಪುರ ವಾರ್ಡಿನಲ್ಲಿ ಅಮೃತ್ ನಗರೋತ್ಥಾನ ಕಾಮಗಾರಿಗಳಿಗೆ ಸಚಿವ ವಿ.ಸೋಮಣ್ಣ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಕಾಮಾಕ್ಷಿಪಾಳ್ಯದ ಸಲ್ಲಾಪುರಿಯಾ ಸತ್ವ ಅಪಾರ್ಟ್‌ಮೆಂಟ್ ಹತ್ತಿರ ಅಂಗನವಾಡಿ ಕೇಂದ್ರದ ಶಂಕುಸ್ಥಾಪನೆ, ಗಣೇಶ ಭವನ ಹೋಟೆಲ್ ಹತ್ತಿರ ಪೇಟೆ ಚನ್ನಪ್ಪ ಇಂಡಸ್ಟ್ರೀಯಲ್ ಏರಿಯಾದ 1ನೇ ಅಡ್ಡರಸ್ತೆಯಲ್ಲಿ ಡಾಂಬರೀಕರಣ, ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ, ರಂಗನಾಥಪುರ (ಸಾಯಿಬಾಬಾ ದೇವಸ್ಥಾನದ ಹಿಂಭಾಗ)ದ 2ನೇ ಮುಖ್ಯರಸ್ತೆಯಲ್ಲಿ ಡಾಂಬರೀಕರಣ, ಸಿಮೆಂಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ, ಪಟ್ಟೇಗಾರಪಾಳ್ಯ ಶೋಭಾ ಆಸ್ಪತ್ರೆ ಸಿಗ್ನಲ್ ಹತ್ತಿರ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ, ಮುನೇಶ್ವರ ನಗರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಎಸ್.ವಿ.ಜಿ.ನಗರ (ಆರ್.ಓ.ಪ್ಲಾಂಟ್ ಹತ್ತಿರ)1ನೇ ಮುಖ್ಯರಸ್ತೆಯಲ್ಲಿ ಡಾಂಬರೀಕರಣ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.








