Bangalore : ಬೆಂಗಳೂರು – ಬೆಳಗಿನ ಜಾವ 3.30ರವರೆಗೂ ಪಬ್, ಬಾರ್, ರೆಸ್ಟೋರೆಂಟ್ ಓಪನ್
ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಇಂದು ಮತ್ತು ನಾಳೆ ಬೆಳಗಿನ ಜಾವ 3.30ರ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಡಿಸೆಂಬರ್ 14 ಹಾಗೂ 15 ರಂದು ಬೆಳಗಿನ ಜಾವ 3.30 ರ ತನಕ ತೆರೆಯಲು ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.
ಫಿಫಾ ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆಯಲ್ಲಿ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಅವಧಿ ವಿಸ್ತರಣೆ ಮಾಡಲಾಗಿದ್ದು, ಈವರೆಗೆ ಮಧ್ಯರಾತ್ರಿ 1 ಗಂಟೆ ವರೆಗೆ ತೆರೆಯಲು ಮಾತ್ರ ಅವಕಾಶವಿತ್ತು.
ಫಿಫಾ ವಿಶ್ವಕಪ್ ಸೆಮಿಫೈನಲ್ ನಡೆಯುವ ಹಿನ್ನಲೆಯಲ್ಲಿ ಅವಧಿ ವಿಸ್ತರಿಸುವಂತೆ ಫೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಸಂಘಟನೆಯು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಎರಡು ದಿನ ಅವಧಿ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
Bangalore: Bangalore – Pubs, bars, restaurants are open till 3.30 am