Bangalore | ಬಿಡಿಎ ಇನ್ನೊಂದು ಲಂಚದ ಕೂಪ
ಬೆಂಗಳೂರು : ಬಿಡಿಎ ಇನ್ನೊಂದು ಲಂಚದ ಕೂಪ. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ನಾಲ್ಕು ಮಂದಿಗೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ದುಬಾರಿ ಮೌಲ್ಯದ ಪರ್ಯಾಯ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದೆ. ಎತ್ತಂಗಡಿಯಾಗಿರುವ ಬಿಡಿಎ ಆಯುಕ್ತ ರಾಜೇಶ್ ಗೌಡರ ಸ್ಪಂದನ ಕೇಳಿಬಿಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.
ಜನಸ್ಪಂದನಾ ಕಾರ್ಯಕ್ರಮದ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಪಿ ಎಸ್ ಐ ನೇಮಕಾತಿಯ ಹಗರಣ ಈಗ ರಾಷ್ಟ್ರೀಯ ಸುದ್ದಿಯಾಗಿದೆ. ಈ ಹಗರಣದಲ್ಲಿ ಸಚಿವರು, ಮಾಜಿ ಸಚಿವರು ಮತ್ತು ಅವರ ಮಕ್ಕಳು ಸೇರಿದ ಹಾಗೆ ಎಲ್ಲರೂ ಭಾಗಿಯಾಗಿದ್ದಾರೆ. ಇದರಿಂದ ಉದ್ಯೋಗ ವಂಚಿತರಾದ 54,000 ಯುವಜನರಿಂದ ಜನಸ್ಪಂದನ ನಡೆಸಿ ಬಿಜೆಪಿ..
2021 ರಲ್ಲಿ ಕೆಪಿಎಸ್ ಸಿ ನಡೆಸಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ. ಎಫ್ಡಿಎ, ಎಸ್ಡಿಎ, ಪಿಡಬ್ಯ್ಲುಡಿ, ಜೆಇ ಹಾಗೂ ಪೊಲೀಸ್ ಕಾನ್ಸ್ಟೇಬಲ್ ನೇಮಕದ ಲಿಖಿತ ಪರೀಕ್ಷೆಯಲ್ಲೂ ಅಕ್ರಮ. ಸಿಐಡಿ ಚಾರ್ಜ್ ಶೀಟ್ ನಲ್ಲಿ ಎಲ್ಲವೂ ಬಯಲಾಗಿದೆ @BJP4Karnataka. 14/23#ಜನಮರ್ದನ#ಭ್ರಷ್ಟೋತ್ಸವ
— Siddaramaiah (@siddaramaiah) September 10, 2022
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (NCRB) ಪ್ರಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಇದು ದಾಖಲಾಗಿರುವ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಮತ್ತು ಲಂಚ ಸ್ವೀಕಾರದ ಪ್ರಕರಣಗಳ ಆಧಾರದಲ್ಲಿ ನಡೆದ ಸಮೀಕ್ಷೆ.
2021 ರಲ್ಲಿ ಕೆಪಿಎಸ್ ಸಿ ನಡೆಸಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ. ಎಫ್ಡಿಎ, ಎಸ್ಡಿಎ, ಪಿಡಬ್ಯ್ಲುಡಿ, ಜೆಇ ಹಾಗೂ ಪೊಲೀಸ್ ಕಾನ್ಸ್ಟೇಬಲ್ ನೇಮಕದ ಲಿಖಿತ ಪರೀಕ್ಷೆಯಲ್ಲೂ ಅಕ್ರಮ. ಸಿಐಡಿ ಚಾರ್ಜ್ ಶೀಟ್ ನಲ್ಲಿ ಎಲ್ಲವೂ ಬಯಲಾಗಿದೆ.
ಬಿಡಿಎ ಇನ್ನೊಂದು ಲಂಚದ ಕೂಪ. ಗೃಹ ಸಚಿವ @JnanendraAraga ಸೇರಿ ನಾಲ್ಕು ಮಂದಿಗೆ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ದುಬಾರಿ ಮೌಲ್ಯದ ಪರ್ಯಾಯ ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿದೆ.
ಎತ್ತಂಗಡಿಯಾಗಿರುವ ಬಿಡಿಎ ಆಯುಕ್ತ ರಾಜೇಶ್ ಗೌಡರ ಸ್ಪಂದನ ಕೇಳಿಬಿಡಿ. 13/23#ಜನಮರ್ದನ#ಭ್ರಷ್ಟೋತ್ಸವ
— Siddaramaiah (@siddaramaiah) September 10, 2022
ಬೆಂಗಳೂರು ಉಪನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ, ಅಕ್ರಮವಾಗಿ ದಾಖಲೆಗಳ ನೋಂದಣಿ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ವಿಚಾರಣೆ ಆರಂಭಿಸಿದ್ದಾರೆ. ಯಾರ ತಲೆ ಉರುಳುತ್ತೋ ಕಾದು ನೋಡೋಣ ಎಂದು ಬರೆದುಕೊಂಡಿದ್ದಾರೆ.