Bangalore | ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಪ್ಲಾನ್ ಇದ್ದರೇ ಈ ಸ್ಟೋರಿ ಓದಿ
ಬೆಂಗಳೂರು : ನೀವು ನಿಮ್ಮ ಗರ್ಲ್ ಪ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆ ಲೇಟ್ ನೈಟ್ ಲಾಂಗ್ ಡ್ರೈವ್ ಹೋಗೋ ಪ್ಲಾನ್ ನಲ್ಲಿದ್ದೀರಾ..? ಹಾಗಾದ್ರೆ ನೀವು ಈ ಸುದ್ದಿನ ಓದಲೇ ಬೇಕು.
ಯಾಕಂದರೇ ನೀವು ಲಾಂಗ್ ಡ್ರೈವ್ ಹೋಗುವಾ ನಡುರಸ್ತೆಯಲ್ಲಿ ಬೈಕ್ ಅಡ್ಡ ಹಾಕಿ, ನಿಮ್ಮನ್ನ ಬೆದರಿಸಿ ಸುಲಿಗೆ ಮಾಡಿ ಹಲ್ಲೆ ಮಾಡುವ ಗ್ಯಾಂಗ್ ಬೆಂಗಳೂರಿನ ಹೊರವಲಯದಲ್ಲಿ ಕಾಣಿಸಿಕೊಂಡಿದೆ.
ಸದ್ಯ ಈ ಗುಂಪಿನ ಇಬ್ಬರನ್ನು ದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಾರು ಚಾಲಕ ಸುಬ್ರಮಣಿ ಸೇರಿ ಅನಿಲ್ ಕುಮಾರ್ ಹಾಗೂ ಪವನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜುಲೈ 8ರಂದು ಬೈಕ್ ನಲ್ಲಿ ಬರುತ್ತಿದ್ದ ಯುವಕ- ಯುವತಿಯರನ್ನು ಅಡ್ಡಗಟ್ಟಿದ್ರು.
ಅಲ್ಲದೆ ಯುವಕನಿಗೆ ರಾಡ್ ನಿಂದ ಹಲ್ಲೆ ಮಾಡಿ ಕತ್ತಿನಲ್ಲಿ ಚಿನ್ನದ ಚೈನ್ ಕಸಿದುಕೊಂಡಿದ್ದರು.
ನಂತರ ಹತ್ತಿರದ ಎಟಿಎಂ ಗೆ ಕರೆದುಕೊಂಡು ಹೋಗಿ 15,000 ಹಣ ಡ್ರಾ ಮಾಡಿಸಿಕೊಂಡು ಹೋಗಿದ್ದರು.
ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಸದ್ಯ ಇಬ್ಬರನ್ನ ಬಂಧಿಸಿದ್ದಾರೆ.