Bangalore | ಬಿಎಂಟಿಸಿನಲ್ಲಿ 300 ಖಾಲಿ ಹುದ್ದೆಗಳು
ಐಟಿಐ, ಎಸ್ಎಸ್ಎಲ್‌ಸಿ ಪಾಸ್ ಆದವರಿಗೆ ಕೆಲಸ
ಅರ್ಜಿ ಸಲ್ಲಿಕೆಗೆ ಇದೇ ಮಾರ್ಚ್ 30 ಕೊನೆಯ ದಿನ
ದಿ. 30-03-2022 ಕ್ಕೆ ಕನಿಷ್ಠ 16 ವರ್ಷ ತುಂಬಿರಬೇಕು
ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಬೆಂಗಳೂರು : ಎಸ್‌ಎಸ್‌ಎಲ್‌ಸಿ, ಐಟಿಐ ಮುಗಿಸಿಕೊಂಡು ಕೆಲಸಕ್ಕಾಗಿ ಅಲೆದಾಡುತ್ತಿರುವವರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗುಡ್ ನ್ಯೂಸ್ ನೀಡಿದೆ.
ಬಿಎಂಟಿಸಿ 300 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಉದ್ಯೋಗ ಪ್ರಕಟಣೆ ಹೊರಡಿಸಿದೆ.
ಐಟಿಐ, ಎಸ್ಎಸ್ಎಲ್‌ಸಿ ಪಾಸ್ ಆದವರು ಮಾರ್ಚ್ 30ರ ಒಳಗೆ ಅರ್ಜಿ (Application) ಸಲ್ಲಿಕೆಗೆ ಕೊನೆಯ ದಿನವಾಗಿದೆ.
ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ದಿನಾಂಕ 30-03-2022 ಕ್ಕೆ ಕನಿಷ್ಠ 16 ವರ್ಷ ತುಂಬಿರಬೇಕು. ಗರಿಷ್ಠ 26 ವರ್ಷ ಮೀರಿರಬಾರದು.
ಮಾಸಿಕ ತರಬೇತಿ ಭತ್ಯೆ
ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ.6000
ಐಟಿಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂ.7000
ಆನ್‌ಲೈನ್ ಅರ್ಜಿಯ ಪ್ರತಿಯೊಂದಿಗೆ ಇತ್ತೀಚಿನ 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳೊಂದಿಗೆ, ಮೂಲ ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ, ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.bangalore-BMTC recruitment 2022