ಪ್ರೊ ಕಬಡ್ಡಿ ಲೀಗ್ 10ನೇ ಸೀಸನ್ ನಲ್ಲಿ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಸೋಲು ಕಂಡಿದೆ. ಬೆಂಗಳೂರು ಬುಲ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ರೋಚಕ ಸೋಲು ಕಂಡಿದೆ.
ಎರಡೂ ಪಂದ್ಯಗಳ ಮದ್ಯೆ ಜಿದ್ದಾಜಿದ್ದಿನ ಫೈಟ್ ಕಂಡು ಬಂದಿತ್ತು. ಬೆಂಗಾಲ್ ವಾರಿಯರ್ಸ್ ಪರ ಮನಿಂದರ್ ಸಿಂಗ್ ಸತತ ಪಾಯಿಂಟ್ಸ್ ಕಲೆಹಾಕಿದರೆ, ಬೆಂಗಳೂರು ಬುಲ್ಸ್ ತಂಡಕ್ಕೆ ಭರತ್ ಅಂಕ ಗಳಿಸಿದರು. ಹೀಗಾಗಿ ಮೊದಲರ್ಧ ಸಮಬಲದ ಪೈಪೋಟಿಗೆ ಸಾಕ್ಷಿಯಾಯಿತು.
ಮನಿಂದರ್ ಸಿಂಗ್ ಹೋರಾಟದಿಂದಾಗಿ ಬೆಂಗಾಲ್ ತಂಡ ಮೊದಲಾರ್ಧದಲ್ಲಿ 14 ಅಂಕಗಳಿಸಿದರೆ, ಬುಲ್ಸ್ 11 ಅಂಕ ಗಳಿಸಿತು.
ನಂತರದ ಹಾಫ್ ನಲ್ಲಿ ಮನಿಂದರ್ ಸಿಂಗ್ 6 ರೇಡ್ ಪಾಯಿಂಟ್ಸ್, 4 ಬೋನಸ್, 1 ಟ್ಯಾಕ್ಲ್ ನೊಂದಿಗೆ 11 ಅಂಕ ಕಲೆ ಹಾಕಿದರು. ಇನ್ನೊಂದೆಡೆ ಬುಲ್ಸ್ ನ ಭರತ್ 3 ರೇಡ್ ಪಾಯಿಂಟ್ಸ್, 1 ಟ್ಯಾಕ್ಲ್ ಹಾಗೂ 2 ಬೋನಸ್ ಅಂಕ ಗಳಿಸಿದರು. ಆದರೆ, ಕೊನೆಗೆ ಸಪ್ಪೆಯಾದರು. ಹೀಗಾಗಿ ಬೆಂಗಾಲ್ ವಾರಿಯರ್ಸ್ 32-30 ಅಂತರದ ಗೆಲುವು ಕಂಡಿತು.