Bangalore – ಶುಶೃತಿ ಬ್ಯಾಂಕ್ ಮೇಲೆ ಸಿಸಿಬಿ ದಾಳಿ
ಬೆಂಗಳೂರು : ಶುಶೃತಿ ಬ್ಯಾಂಕ್ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿ 14 ಕಡೆ ದಾಳಿ ನಡೆದಿದೆ.
ಈ ದಾಳಿ ವೇಳೆ ನಗದು ಪತ್ತೆಯಾಗಿದೆ. ಬ್ಯಾಂಕ್ ನಲ್ಲಿ ಇದುವರೆಗೆ ನೂರಾರು ಕೋಟಿ ರೂ ವ್ಯವಹಾರ ನಡೆಸಲಾಗಿದೆ.
ಈ ಪೈಕಿ ಕೋಟ್ಯಾಂತರ ರೂ. ಠೇವಣಿದಾರರ ಹಣ ವಾಪಸ್ಸು ನೀಡಿಲ್ಲ. ಜೊತೆಗೆ 8 ರಿಂದ 10% ವರೆಗೆ ಬಡ್ಡಿ ನೀಡುವುದಾಗಿ ಬ್ಯಾಂಕ್ ನಂಬಿಸಿತ್ತು.

ಈ ಬ್ಯಾಂಕ್ 1998 ರಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.
ಬ್ಯಾಂಕಿನಿಂದ ಸಾಲದ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ನೀಡಲಾಗಿದೆ.
ಲೆಕ್ಕಚಾರ ಇಲ್ಲದೇ ಕೆಲವು ವ್ಯಕ್ತಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ನೀಡಲಾಗಿದೆ.
ಸದ್ಯ ಹಣವನ್ನ ಯಾರ್ಯಾರು ಪಡೆದಿದ್ದಾರೆ ಅಂತವರನ್ನ ತನಿಖೆಗೆ ಸಿಸಿಬಿ ಒಳಪಡಿಸಿದೆ.
ಸಿಸಿಬಿ ಅರ್ಥಿಕ ಅಪರಾಧ ವಿಭಾಗದಿಂದ ತನಿಖೆ ನಡೆಯುತ್ತಿದೆ.








