ಬೆಂಗಳೂರಲ್ಲಿ ಕೊರೊನಾ ಅಬ್ಬರ : ಒಂದೇ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಸೋಂಕು Bangalore corona saaksha tv
ಬೆಂಗಳೂರು : ರಾಜ್ಯದಲ್ಲಿ ಶಾಲಾ- ಕಾಲೇಜು ಆರಂಭಗೊಂಡು ತರಗತಿಗಳು ಶುರುವಾಗಿವೆ.
ಇದರ ಮಧ್ಯೆ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಿಸಿದೆ.
ಬೆಂಗಳೂರಿನ ಹೊರಮಾವಿನಲ್ಲಿರುವ ನ್ಯೂಕ್ರಿಶ್ಚಿಯನ್ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತ ವಿದ್ಯಾರ್ಥಿಗಳು ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯದ ಮೂಲದವರು ಎಂದು ತಿಳಿದುಬಂದಿದೆ.
ಸದ್ಯ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 5 ಹಾಸ್ಟೆಲ್, ಒಂದು ಕಾಲೇಜು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.