Bangalore- murder| | ಆಸ್ತಿಗಾಗಿ ಅತ್ತೆಯನ್ನ ಕೊಂದ ಸೊಸೆ
ಬೆಂಗಳೂರು : ಆಸ್ತಿ ವಿಚಾರವಾಗಿ ಸೊಸೆಯೇ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ನಗರದ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಣಿ (76) ಕೊಲೆಯಾದ ದುರ್ದೈವಿ, ಸುಗುಣ ಕೊಲೆ ಆರೋಪಿ.
ಆಸ್ತಿ ವಿಚಾರವಾಗಿ ಇದೇ ತಿಂಗಳ 12 ರ ರಾತ್ರಿ ಸುಗುಣ, ರಾಣಿಯನ್ನ ಹೊಡೆದು ಕೊಲೆ ಮಾಡಿದ್ದಾರೆ.
ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಸುಗುಣ ಅವರನ್ನು ಬಂಧಿಸಿದ್ದಾರೆ.
ರಾಣಿ ಅವರು ತಮ್ಮ ಮೂವರು ಗಂಡು ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿ ಮತ್ತೊಂದು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಆ ಮನೆಯನ್ನು ಕೊಡುವಂತೆ ಸುಗುಣ ಪೀಡಿಸುತ್ತಿದ್ದರಂತೆ.
ಮನೆ ನೀಡಲು ರಾಣಿ ನಿರಾಕರಿಸಿದ್ದಾಗ ಜಗಳ ಶುರುವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.