Bangalore | ಐಟಿಸಿಟಿಯಲ್ಲಿ ಮಳೆ ಮಾಡಿದ ಹಾನಿ ಎಷ್ಟು ಗೊತ್ತಾ?
ಬೆಂಗಳೂರು : ಐಟಿ ಸಿಟಿ ಬೆಂಗಳೂರಿನಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಬ್ರ್ಯಾಂಡ್ ಬೆಂಗಳೂರು ಹೆಸರು ಬರ್ಬಾದ್ ಆಗಿದೆ. ನಿರೀಕ್ಷೆಗೂ ಮೀರಿ ಸುರಿದ ಮಳೆಗೆ ಹಿಂದೆಂದೂ ಕಂಡಿಯರಿಯದ ರೀತಿಯಲ್ಲಿ ಸಿಲಿಕಾನ್ ಸಿಟಿ ನಷ್ಟ ಅನುಭವಿಸಿದೆ.
ಇದೀಗ ಮಹಾನಗರ ಪಾಲಿಕೆ ಮಹಾ ಮಳೆ ಹಾನಿಯ ಸಂಪೂರ್ಣ ಲೆಕ್ಕ ಹಾಕಿದ್ದು, ಸಂಪೂರ್ಣ ಹಾನಿ ಕುರಿತಂತೆ ಕಂದಾಯ ಇಲಾಖೆಗೆ ಪತ್ರ ಬರೆದಿದೆ.
ಮಹಾ ಮಳೆಗೆ ಬರೋಬ್ಬರಿ 400 ಕೋಟಿಯಷ್ಟು ನಷ್ಟ ಆಗಿದೆಯಂತೆ.
ಕಂದಾಯ ಇಲಾಖೆಗೆ ಕೊಟ್ಟ ವರದಿ ಹೀಗಿದೆ
ಪೂರ್ವ ವಲಯ :
ಒಟ್ಟು ಹಾನಿ 37.53 ಕೋಟಿ
ಹಾಳಾದ ರಸ್ತೆಯ ಉದ್ದ 83.46 ಕಿಮೀ
ಹಾನಿಗೊಳಾಗದ ಮನೆಗಳು – 1549
ಪಶ್ಚಿಮ ವಲಯ :
ಯಾವುದೇ ಹಾನಿಯಾಗಿಲ್ಲ
ದಕ್ಷಿಣ ವಲಯ :
ಒಟ್ಟು ಹಾನಿ 50ಕೋಟಿ
ಹಾಳಾದ ರಸ್ತೆಯ ಉದ್ದ 56.45 ಕಿಮೀ
ಹಾನಿಗೊಳಾಗದ ಮನೆಗಳು – 88
ಬೊಮ್ಮನಹಳ್ಳಿ ವಲಯವಲಯ :
ಒಟ್ಟು ಹಾನಿ 15 ಕೋಟಿ
ಹಾಳಾದ ರಸ್ತೆಯ ಉದ್ದ 23ಕಿಮೀ
ಹಾನಿಗೊಳಾಗದ ಮನೆಗಳು – 340
ರಾಜರಾಜೇಶ್ವರಿ ನಗರ ವಲಯ :
ಒಟ್ಟು ಹಾನಿ 10 ಕೋಟಿ
ಹಾಳಾದ ರಸ್ತೆಯ ಉದ್ದ 39 ಕಿಮೀ
ಹಾನಿಗೊಳಾಗದ ಮನೆಗಳು – ಯಾವುದೂ ಇಲ್ಲ
ಯಲಹಂಕ ವಲಯ :
ಒಟ್ಟು ಹಾನಿ 1.5 ಕೋಟಿ
ಹಾಳಾದ ರಸ್ತೆಯ ಉದ್ದ 2.5 ಕಿಮೀ
ಹಾನಿಗೊಳಾಗದ ಮನೆಗಳು – 342
ಒಟ್ಟಾರೆ ಹಾನಿ :
ಒಟ್ಟು ಹಾನಿ 445.03 ಕೋಟಿ
ಹಾಳಾದ ರಸ್ತೆ 204.41 ಕಿಮೀ
ಹಾನಿಗೊಳಾದ ಮನೆಗಳು – 2319