Bangalore | ಆರೋಗ್ಯವೇ ಭಾಗ್ಯ ಎಂಬ ಧ್ಯೇಯದೊಂದಿಗೆ ಉಚಿತ ರಕ್ತದಾನ ಶಿಬಿರ
ಬೆಂಗಳೂರು : ಇಂಡಿಯನ್ ಯೂತ್ ರೆಡ್ ಕ್ರಾಸ್ ಯೂನಿಯನ್, ನ್ಯಾಷನಲ್ ಸರ್ವಿಸ್ ಸ್ಕೀಮ್ ಅಂಡ್ ನಾರಾಯಣ ಹೆಲ್ತ್ ಸೆಂಟರ್, ರಾಜರಾಜೇಶ್ವರಿ ಡೆಂಟಲ್ ಕಾಲೇಜು ಸಹಯೋಗದಲ್ಲಿ ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅದ್ಯಕ್ಷರು ಉಪೇಂದ್ರ ಶೆಟ್ಟಿ, ಆರೋಗ್ಯವೇ ಭಾಗ್ಯ ಎಂಬ ಧ್ಯೇಯದೊಂದಿಗೆ ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಉಚಿತ ಆರೋಗ್ಯ ಶಿಬಿರದಿಂದ ರಾಮೋಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಈಗಾಗಲೇ ಬಹಳಷ್ಟು ಮಂದಿ ಸ್ಥಳೀಯರು ಈ ಶಿಬಿರದ ಸಹಾಯವನ್ನ ಪಡೆದಿದ್ದಾರೆ.
ಇಂದಿನ ಯುವ ಪೀಳಿಕೆ ಜಂಕ್ ಫುಡ್ ಗೆ ಹೆಚ್ಚಾಗಿ ಅಡಿಕ್ಟ್ ಆಗಿದೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಆಹಾರದಲ್ಲಿ ಶಿಸ್ತಿನ ಜೊತೆಗೆ ಉತ್ತಮ ಜೀವನ ಪದ್ದತಿಯನ್ನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ಸಣ್ಣ ವಯ್ಸಸ್ಸಿನಲ್ಲಿಯೇ ಕಾಳಜಿವಹಿಸಿ ಉತ್ತಮ ಜೀವನ ಕಟ್ಟಿಕೊಳ್ಳಿ ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ದಂಡ ವೈದ್ಯಕೀಯ ಮಹಾವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ಪ್ರಸನ್ನ, ವಿಷನ್ ಟೆಕ್ ಐ ಆಸ್ಪತ್ರೆ ಡಾ.ರಾಘವೇಂದ್ರ, ನಾರಾಯಣ ಹೆಲ್ತ್ ಸೆಂಟರ್ ನ ಡಾ. ಬ್ರಾಮಪ್ರಕಾಶ್, ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ಸಂತೋಷ್ ಶೆಟ್ಟಿ, ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತಿದ್ದರು.









