ಬೆಂಗಳೂರಲ್ಲಿ ಕಾಲೇಜು ತರಗತಿಗಳು ಇದಿಯೋ..? ಇಲ್ಲವೋ..?
ಬೆಂಗಳೂರು : ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ರಾಜ್ಯದಾದ್ಯಂತ ಹಾಫ್ ಲಾಕ್ ಡೌನ್ ಜಾರಿ ಮಾಡಿದೆ.
ನಾಳೆಯಿಂದ ರಾಜ್ಯದಲ್ಲಿ ಕಠಿಣ ಕ್ರಮಗಳು ಜಾರಿಗೆ ಬರಲಿದ್ದು, ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.
ಅದರಲ್ಲೂ ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನ ಅಬ್ಬರ ಮಿತಿ ಮೀರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಹೀಗಾಗಿ ರಾಜ್ಯ ಸರ್ಕಾರ ಬೆಂಗಳೂರಿಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದೆ.
ಅದರಂತೆ ನಗರದಲ್ಲಿ ಮಾಲ್, ಥೀಯೇಟರ್, ದೇವಸ್ಥಾನ, ಹೋಟಲ್ ಗಳಲ್ಲಿ ಶೇಕಡಾ 50 ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಮುಖ್ಯವಾಗಿ ನಗರದಲ್ಲಿ 10 ಮತ್ತು 12 ತರಗತಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ತರಗತಿಗಳು ಬಂದ್ ಆಗಿರಲಿವೆ.
ಈ ಬಗ್ಗೆ ನಿನ್ನೆ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪತ್ರಕರ್ತರು ಕಾಲೇಜಿನ ವಿಚಾರವಾಗಿ ಕೊಂಚ ಗೊಂದಲ ಇದೆ. ಕಾಲೇಜುಗಳು ಓಪನ್ ಇರುತೋ ಇಲ್ಲವೋ ಎಂದು ಕೇಳಿದರು.
ಈ ವೇಳೆ ಉತ್ತರಿಸಿದ ಅಶೋಕ್, ಮೆಡಿಕಲ್, ಪ್ಯಾರಾ ಮೆಡಿಸನ್ ಕಾಲೇಜು ಹೊರೆತುಪಡಿಸಿ ಉಳಿದ ಎಲ್ಲ ಕಾಲೇಜು ಬಂದ್ ಎಂದು ತಿಳಿಸಿದ್ದಾರೆ.