ಹಾಫ್ ಅಲ್ಲ.. ಬೆಂಗಳೂರು ಕಂಪ್ಲೀಟ್ ಲಾಕ್..?! bangalore lockdown guidelines today saaksha tv
ಬೆಂಗಳೂರು : ಕೊರೊನಾ ಹೆಮ್ಮಾರಿ ಅಬ್ಬರ.. ಕಂಪ್ಲೀಟ್ ಲಾಕ್ ಆಗುತ್ತಾ ಬೆಂಗಳೂರು..? ಕೇಂದ್ರದ ರೂಲ್ಸ್ ಪ್ರಕಾರ ಬೆಂಗಳೂರು ಇನ್ ಡೇಂಜರ್..
ಹೌದು..! ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ಮತ್ತೆ ಅಬ್ಬರಿಸಿ ಬೊಬ್ಬರಿಯುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಹಾಫ್ ಲಾಕ್ ಡೌನ್ ಜಾರಿ ಮಾಡಿದೆ. ಮುಖ್ಯವಾಗಿ ಬೆಂಗಳೂರು ಕೊರೊನಾ ರೆಡ್ ಜೋನ್ ನಲ್ಲಿದ್ದು, ಪ್ರತಿ ದಿನ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿವೆ.
ನಿನ್ನೆ ಬೆಂಗಳೂರಿನಲ್ಲಿ 2000ಕ್ಕೂ ಅಧಿಕ ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಇವತ್ತು ಆ ಕೇಸ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿವೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಬರೋಬ್ಬರಿ 3605 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇದರ ಜೊತೆಗೆ ನಗರದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 6.45ಕ್ಕೆ ತಲುಪಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ರೂಲ್ಸ್ ಪ್ರಕಾರ ಯಾವುದೇ ನಗರದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 5 ಮೀರಿದರೇ ಆ ನಗರವನ್ನು ಲಾಕ್ ಡೌನ್ ಮಾಡಬೇಕಾಗುತ್ತದೆ.
ಆ ನಿಯಮದಂತೆ ನೋಡಿದ್ರೆ ಸದ್ಯ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 6.45ಕ್ಕೆ ಬಂದು ನಿಂತಿದೆ. ಇದು ನಾಳೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರವನ್ನು ಕಂಪ್ಲೀಟ್ ಲಾಕ್ ಮಾಡುತ್ತಾ..? ಎಂಬ ಪ್ರಶ್ನೆ ಹುಟ್ಟುಕೊಂಡಿದೆ.









