Bangalore | ATMನಲ್ಲಿ ಸಹಾಯ ಮಾಡಿದ ವ್ಯಕ್ತಿಯಿಂದ ವಂಚನೆ
ನಿವೃತ್ತ ಸರ್ಕಾರಿ ನೌಕರನಿಗೆ 8.5 ಲಕ್ಷ ರೂ. ವಂಚನೆ
ಡೆಬಿಡ್ ಕಾರ್ಡ್ ಬದಲು ಮಾಡಿ ವೃದ್ಧನಿಗೆ ವಂಚನೆ
32 ವರ್ಷದ ಮಲ್ಲಿನಾಥ ಅಂಗಡಿ ಎಂಬಾತ ಅರೆಸ್ಟ್
ಬಂಧಿತನಿಂದ ನಾಲ್ಕು ಬಳೆ, ಮೂರು ಉಂಗುರ ವಶ
ಬೆಂಗಳೂರು : ಎಟಿಎಂ ನಲ್ಲಿ ಹಣ ತೆಗೆಯಲು ಸಹಾಯ ಮಾಡಿ ವೃದ್ಧನಿಗೆ 8.5 ಲಕ್ಷ ರುಪಾಯಿ ವಂಚಿಸಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.
ಎಂ.ಜಿ.ರಾಮಕೃಷ್ಣ ವಂಚನೆಗೆ ಒಳಗಾದವರಾಗಿದ್ದಾರೆ. ಮೇ 21 ಎಂದು ಡೆಬಿಟ್ ಕಾರ್ಡ್ ಪಡೆದಿದ್ದ ರಾಮಕೃಷ್ಣ, ಹೊಸ ಪಿಚ್ ರಚಿಸಲು ಎಟಿಎಂ ಕಿಯೋಸ್ಕ್ ಗೆ ತೆರಳಿದ್ದರು.
ಆಗ ಅಲ್ಲದೇ ಇದ್ದ ಮಲ್ಲಿನಾಥ ಅಂಗಡಿ ಎಂಬುವವರಿಂದ ಸಹಾಯ ಪಡೆದುಕೊಂಡಿದ್ದರು.
ಈ ವೇಳೆ ಡೆಬಿಡ್ ಕಾರ್ಡ್ ನೀಡುವಾಗ ಮಲ್ಲಿನಾಥ್ ತನ್ನ ಬಳಿ ಇದ್ದ ಕಾರ್ಡ್ ನೀಡಿ, ರಾಮಕೃಷ್ಣ ಅವರ ಕಾರ್ಡ್ ತನ್ನಲ್ಲಿಯೇ ಇರಿಸಿಕೊಂಡಿದ್ದಾನೆ.

ಬಳಿಕ ಅದರಲ್ಲಿ ಸಾಕಷ್ಟು ಹಣ ತೆಗೆದುಕೊಂಡಿದ್ದಾನೆ.
ಈ ವಿಷಯ ತಿಳಿದ ರಾಮಕೃಷ್ಣ ಅವರು ಪೊಲೀಸರ ಮೊರೆ ಹೋಗಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ.
ಈ ದೂರಿನ ಅನ್ವಯ ಈಶಾನ್ಯ ಸಿಇಎನ್ ಪೊಲೀಸರು ಅಟ್ಟೂರ್ ಲೇಔಟ್ ನಲ್ಲಿದ್ದ ಮಲ್ಲಿನಾಥ ಅಂಗಡಿ ಯವರನ್ನು ಬಂಧಿಸಿದ್ದಾರೆ.
ಅಲ್ಲದೇ ಆರೋಪಿಯ ಬಳಿಯಿಂದ ನಾಳ್ಕು ಬಳೆ, ಮೂರು ಉಂಗುರಗಳನ್ನು ವಶ ಪಡೆದುಕೊಂಡಿದ್ದಾರೆ.