Bangalore | ಸಾವಿನಲ್ಲೂ ಸಾರ್ಥಕತೆ ಮೆರೆದ ಕಾರ್ಮಿಕ
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ವೆಸ್ಟ್ ಬೆಂಗಾಲ್ ಮೂಲದ ವ್ಯಕ್ತಿಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
44 ವರ್ಷದ ಕಾರ್ಮಿಕ ಕಿಶೋರ್ ತೂಪೊ ಬ್ರೈನ್ ಡೆಡ್ ಆಗಿದ್ದರು. ಹೀಗಾಗಿ ಅವರ ಕುಟುಂಬದವರು ಕಿಶೋರ್ ಅವರ ಅಂಗಾಗಳನ್ನು ದಾನ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಾ.ಕೆ.ಸುಧಾಕರ್, ಕಿಶೋತ್ ಅವರ ಮೂತ್ರಪಿಂಡಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳು ಅಗತ್ಯವಿರುವ ರೋಗಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘ತನ್ನ ಮಗಳು ನರ್ಸಿಂಗ್ ಓದಬೇಕು ಮತ್ತು ಬುಡಕಟ್ಟು ಸಮುದಾಯಗಳಿಗೆ ಸೇವೆ ಸಲ್ಲಿಸಬೇಕು ಎಂಬ ಕನಸನ್ನು ಕಿಶೋರ್ ಹೊಂದಿದ್ದರು.
ಅದೇ ಕನಸು ಅವರ ಅಂಗಗಳನ್ನು ದಾನ ಮಾಡಲು ಅವರ ಕುಟುಂಬವನ್ನು ಪ್ರೇರೇಪಿಸಿದೆ.
ಹಿಂದುಳಿದ ಸಮುದಾಯಗಳ ಕುಟುಂಬಗಳು ಸಹ ಅಂಗಾಂಗ ದಾನಕ್ಕೆ ಮುಂದೆ ಬರುತ್ತಿರುವುದು ಸಂತಸದ ವಿಷಯ ಎಂದು ಸುಧಾಕರ್ ಬರೆದುಕೊಂಡಿದ್ದಾರೆ. bangalore-Minister Sudhakar lauds working family for donating organs