Bangalore Rain – ಬೆಂಗಳೂರಿನಲ್ಲಿ ದಾಖಲೆ ಮಟ್ಟದ ಮಳೆ.. ಇನ್ನೈದು ದಿನ ವರ್ಷಧಾರೆ
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, 92 ವಾರ್ಡ್ಗಳಲ್ಲಿ ದಾಖಲೆ ಮಟ್ಟದ ಮಳೆಯಾಗಿದೆ.
ನಿನ್ನೆ ಬೆಂಗಳೂರಿನ 8 ವಲಯದಲ್ಲಿ ಧೋ ಎಂದು ಮಳೆಯಾಗಿದ್ದು, ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್ ಆರ್ ನಗರ 66.5 ಮಿ.ಮೀ, ಸಂಪರಿರಾಮನಗರದಲ್ಲಿ 66 ಮಿ.ಮೀ ಮಳೆಯಾಗಿದೆ.
ಇನ್ನೈದು ದಿನ ಭಾರಿ
ಈಗಾಗಲೇ ಮಳೆಯಿಂದಾಗಿ ಬರ್ಬಾದ್ ಆಗಿರುವ ಬೆಂಗಳೂರಿನಲ್ಲಿ ಇನ್ನೈದು ದಿನಗಳ ಕಾಲ ಭಾರಿ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.